ಜಗಜ್ಯೋತಿ ಬಸವೇಶ್ವರ ಜಯಂತಿ-ವಿಶೇಷ ಲೇಖನ

*ಜಗಜ್ಯೋತಿ ಬಸವೇಶ್ವರ ಜಯಂತಿ-ವಿಶೇಷ ಲೇಖನ*

_“ಕಾಯಕವೇ ಕೈಲಾಸ” (Work is Workship) ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿಯನ್ನು ಮಾಡಲೇಬೇಕು. ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬೇಕು. ಕೆಲಸವೇ ಪೂಜೆ, ಕೆಲಸವೇ ದೇವರು. ಕೆಲಸದಲ್ಲಿಯೇ ಕೈಲಾಸವನ್ನು ಕಾಣಬೇಕೆಂದು ಹೇಳಿದವರು

🔯🔯 ಜಗಜ್ಯೋತಿ ಬಸವೇಶ್ವರರು._🔯🔯

_ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿದರು._ _ಇಂಗಳೇಶ್ವರ ಬಾಗೇವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯ ಮಗನಾಗಿ ಆನಂದನಾಮ_ ಸಂವತ್ಸರದಲ್ಲಿ _ವೈಶಾಖಮಾಸದ ಅಕ್ಷಯ ತೃತೀಯದಂದು  ಏಪ್ರಿಲ್ 30 1134 ರೋಹಿಣ  ನಕ್ಷತ್ರದಲ್ಲಿ ಜನಿಸಿದರು. ಯಾವುದೇ_ _ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ  ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು-ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಹೋದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ,_ _ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು. ಎಲ್ಲ ದೇವರನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ ಪ್ರಾಣ ಗಳ ಆಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ ಇದು ಗೋಲಾಕಾರದಲ್ಲಿದೆ. ಆದ್ದರಿಂದ ಲಿಂಗದೇವನನ್ನು ವಿಶ್ವಾದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟ ಲಿಂಗದ ಪರಿಕಲ್ಪನೆ ನೀಡಿದರೂ, ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನಾಗಬೇಕು._ _ನವ ಸಮಾಜ ನಿರ್ಮಾಣದ ರೂಪುರೇಷಗಳನ್ನು ತಮ್ಮ ಮನದಲ್ಲಿ ಹೊಂದಿ ಕಲ್ಯಾಣದ ಕಾರ್ಯಕ್ಷೇತ್ರವನ್ನು_ _ಪ್ರವೇಶಿಸಿದರು. ಸೋದರ ಮಾವನ ಮಗಳು ನೀಲಾಂಬಿಕೆಯನ್ನು ವಿವಾಹವಾಗಿ ಕರಣ ಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ ಪ್ರಧಾನಿ (ದಂಡನಾಯಕ) ಯಾಗಿ ಕಾರ್ಯ ನಿರ್ವಹಿಸಿದರು._ _ಬಸವ ಕಲ್ಯಾಣದಲ್ಲಿ ಬಸವಣ್ಣನವರು ಶರಣರ ಜೊತೆ ಸೇರಿ ಅನುಭವ ಮಂಟಪ_ _ಸ್ಥಾಪಿಸಿದರು. ಅನುಭವ ಮಂಟಪವು ವಿಶ್ವ ಮಾನವ ಸಂದೇಶ ಮತ್ತು ವಿಚಾರಗಳ ಬಗೆಗೆ ಮುಕ್ತವಾಗಿ ಚರ್ಚಿಸಬಹುದಾದ ವೇದಿಕೆಯಾಗಿದೆ_ . _ಅನುಭವ ಮಂಟಪದಿಂದ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ_ _ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು._
_ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸವೆಂದು ಸಾರಿದರು. ಅಸ್ಪ್ರಶ್ಯತೆಯ ಹೆಸರಿನಲ್ಲಿ ಊರ ಹೊರಗೆ ಇರಿಸಲಾದ ದಲಿತರನ್ನು ಕರೆತಂದು ಸಮಾಜದ ಭಾಗವನ್ನಾಗಿ ಮಾಡಿದರು_ . _ದೇವಾಲಯ, ಕುಡಿಯುವ ನೀರಿನ ಬಾವಿ-ಕೆರೆಗಳನ್ನು ಬಳಸಲು ಇವರಿಗೂ ಸಮಾನ ಹಕ್ಕಿದೆಯಂದು ತೋರಿಸಿದರು._ _“ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ”_ _ಎಂದು ಬಸವಣ್ಣನವರು ಪುರೋಹಿತಶಾಹಿ ವ್ಯವಸ್ಥೆ ಮತ್ತು ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ_ _ಶೋಷಣೆಯನ್ನು ಖಂಡಿಸಿದ್ದರು. ಬ್ರಾಹ್ಮಣ ಸಮಾಜದ ಶರಣರಾದ ಮಧುವರಸರ ಮಗಳನ್ನು ಸಮಗಾರ ಸಮಾಜದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು._ _ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಬಸವಣ್ಣನವರ ವಿರುದ್ಧ ಪ್ರೇರೇಪಿಸಿ ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು. ಧರ್ಮಪಿತರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನ ಮಾಡಿ ಅವರು ವರ್ಣಾಂತರ_ _ವಿವಾಹದಲ್ಲಿ ಭಾಗಿಯಾದುದಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ._ _ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶ ಮಾಡಲು  ಸನ್ನದ್ಧರಾದಾಗ ವೀರಮಾತೆ ಅಕ್ಕನಾಗಲಾಂಬಿಕೆ, ಚೆನ್ನಬಸವಣ್ಣ, ವೀರ ಗಣಾಚಾರಿ, ಮಡಿವಾಳ, ಮಾಚಯ್ಯನವರು ವೀರಾಗ್ರಣ ಗಳಾಗಿ ಕಾದಾಡಿ ವಚನ ಸಾಹಿತ್ಯ ನಿಧಿಯನ್ನು ಉಳಿಸಿಕೊಟ್ಟರು._ _ಇದೇ ಸಮಯದಲ್ಲಿ ಚೆನ್ನಬಸವಣ್ಣನವರು ಉತ್ತರ ಕನ್ನಡ ಜಿಲ್ಲೆಯ ಉಳವಿಗೆ ಬಂದು ನೆಲೆಸಿದರು._  
_ಬಸವಣ್ಣನವರು 1196 ರಲ್ಲಿ ಕೂಡಲಸಂಗಮಕ್ಕೆ ಮರಳಿ ಬಂದರು. 7 ಜುಲೈ 1196 ನಳನಾಮ ಸಂವತ್ಸರದ_ _ಶ್ರಾವಣ ಶುದ್ಧ ಪಂಚಮಿಯಂದು ಉರಿಯುಂಡ ಕರ್ಪೂರದಂತೆ ಲಿಂಗೈಕ್ಯರಾದರು. ಅವರ ಸಮಾಧಿಯು ಅಲ್ಲಯೇ ಇದೆ._ _ಅವರ ಸಮಾಧಿಯನ್ನು ಕರ್ನಾಟಕ ಸರಕಾರದಿಂದ ಬಸವ ಸಾಗರ ಹಿನ್ನೀರಿನಲ್ಲಿ ಮುಳಗದಂತೆ ರಕ್ಷಿಸಿಲ್ಪಟ್ಟಿದೆ._ 

🔯🔯 _ *ಬಸವಣ್ಣನವರ ತತ್ವಗಳು*:-_ 🔯🔯

_ದೇವನೊಬ್ಬ ನಾಮ ಹಲವು  ನಮ್ಮನ್ನೆಲ್ಲ ಸೃಷ್ಟಿಸಿದ ದೇವರು ಒಬ್ಬನೇ, ಮಾನವನಿಗೆ ಯಾವುದೇ ರೀತಿ_ _ಜಾತಿಕುಲಗಳಿಲ್ಲ ಮಾನವ ಜಾತಿ ಒಂದೇ. ಸ್ವರ್ಗ-ನರಕಗಳು ಬೇರಿಲ್ಲ :- ಪಾಪ-ಪುಣ್ಯ ಫಲವಾಗಿ ಸ್ವರ್ಗ-ನರಕಗಳು ಬೇರಿಲ್ಲ, ಅಯ್ಯಾ ಎಂದೊಡಿ ಸ್ವರ್ಗ, ಎಲವೇ ಎಂದರೆ ನರಕ, ಆಚಾರವೇ ಸ್ವರ್ಗ,_ ಅನಾಚಾರವೇ ನರಕ, ಸತ್ಯ _ನುಡಿವುದೇ ದೇವಲೋಕ ಮಿಥ್ಯ ನುಡಿಯುವುದೇ ಮೃತ್ರ್ಯಲೋಕ ಎಂದು ತಿಳಿಸಿದರು. ದಯವೇ ಧರ್ಮದ.

ಮೂಲ_ :- _⤵️⤵️⤵️

ಯಾವುದೇ ಧರ್ಮದ ಮೂಲ ದಯೆ ದಯವಿಲ್ಲದ ಧರ್ಮ ಅದಾವುದಯ್ಯ? ದಯವಿರಬೇಕು ಸಕಲ ಪ್ರಾಣ ಗಳೆಲ್ಲರಲ್ಲಿ ಎಂದು ತಿಳಿಸಿ ಹಿಂಸಾಚಾರವನ್ನು ತಡೆಗಟ್ಟಿದರು._
_ಕಾಯಕವೇ ಕೈಲಾಸ :-_ _ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿಯನ್ನು ಮಾಡಲೇ ಬೇಕಾಗುವುದು. ಅದರಲ್ಲಿಯೇ ದೇವರನ್ನು ಕಾಣ ರೋ ಎಂದರು._ _ಸಮತಾವಾದ :- ನಮ್ಮ ದೇಶದಲ್ಲಿ  12 ನೇ ಶತಮಾನದಲ್ಲಿ ಸಮತಾವಾದದ ಬೀಜ ಬಿತ್ತಿದ ಪ್ರಥಮ ವ್ಯಕ್ತಿ_ _ಎಂದರೆ ಶ್ರೀ ಬಸವಣ್ಣನವರು. ಜಾತಿ ಪದ್ಧತಿಗಳು ಕೇವಲ ಉದ್ಯೋಗದಿಂದ ಹುಟ್ಟಿ ಬಂದವುಗಳು, ಅವುಗಳನ್ನು ನಾವೇ ಮಾಡಿಕೊಂಡಿದ್ದೇವೆ. ಆದರೆ ಮಾನವ ಜಾತಿ ಒಂದೇ.

Post a Comment

2 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)