ಸಿಂಧೂ ನಾಗರಿಕತೆ ವೇದ ಮತ್ತು ಮಹಾಕಾವ್ಯಗಳ ಕಾಲ

ಭಾರತೀಯ ಇತಿಹಾಸ

ಸಿಂಧೂ ನಾಗರಿಕತೆ

(ಕ್ರಿ. ಪೂ. ಸು. 3000 ರಿಂದ 1500 ರವರೆಗೆ) ಈಜಿಪ್ಟ್ ಸುಮೇರಿಯನ್, ಬ್ಯಾಬಿಲೋನಿಯಾ ಇವುಗಳ ಸಮಕಾಲೀನ ನಾಗರಿಕತೆ ಇದು.)
ಸಂಶೋಧನೆ :
1921 ರಾವಿ ದಂಡೆ – ಹರಪ್ಪಾ – ದಯಾರಾಮ ಸಹಾನಿಯವರಿಂದ
1922 ಸಿಂಧ – ಮೊಹೆಂಜೋದಾರೊ – ಆರ್. ಡಿ. ಬ್ಯಾನರ್ಜಿ.
ಕಾಲ :  ಸರ್ ಜಾನ್ ಮಾರ್ಶಲ್ ಪ್ರಕಾರ ಕಿ.ಶ.ಪೂ 3200 ರಿಂದ 2700
ಲಕ್ಷಣಗಳು :  ಸುಸಜ್ಜಿತ ನಗರ.
ಉದ್ಯೋಗ :  ಕೃಷಿಕರು, ವ್ಯಾಪಾರಸ್ಥರು, ಪುರೋಹಿತರು, ತಜ್ಞರು, ಅನ್ಯರು.
ದೇವತೆಗಳು : ಶಿವ, ಮಾತೃದೇವತೆ
ಆಹಾರ, ವಿಹಾರ : ಅಕ್ಕಿ, ಗೋಧಿ, ಬಾರ್ಲಿ, ಮೀನು, ಮಾಂಸ, ಹಣ್ಣು ಇತ್ಯಾದಿ. ಹತ್ತಿ ಬಟ್ಟೆ, ಕಾಂತಿವರ್ಧಕಗಳು.
ಜೂಜು :  ಬೇಟೆ, ಗೂಲಿ ಕಾಳಗ
ಅವನತಿ :  ಬಹುಶಃ ಆರ್ಯರ ದಾಳಿಯಿಂದಾಗಿರಬೇಕೆಂದು ನಂಬಿಕೆ.

1. ವೇದಗಳ ಕಾಲ

(ಕ್ರಿ.ಪೂ. ಸುಮಾರು 1700 ರಿಂದ 600)
(ಅ) ಉತ್ತರಾರ್ಧ – ಕ್ರಿ . ಪೂ. ಸು. 1700 ರಿಂದ 1000)
ಉತ್ತರ ಧ್ರುವ, (ಆರ್ಕಟಿಕ್ ಪ್ರದೇಶ) ಅಥವಾ ಮಧ್ಯ ಏಶಿಯಾದಿಂದ ಆರ್ಯರ ಆಗಮನವೆಂಬುದು ನಂಬಿಕೆ. ಪ್ರಥಮವಾಗಿ ಸಿಂಧು ನದಿಯ ದಂಡೆಯಲ್ಲಿ ವಾಸ. ಗಂಗಾ ಬಯಲಿನಲ್ಲೆಲ್ಲ ಮುಂದುವರಿಕೆ.
ಉತ್ತರ ಭಾರತಕ್ಕೆ ಆರ್ಯಾವರ್ತವೆಂದು ಹೆಸರು.
ವಿಸ್ತಾರ : ಆಫ್ಘಾನಿಸ್ತಾನದಿಂದ – ಗಂಗಾನದಿ ಬಯಲಿ ನವರೆಗೆ.
ಸಾಹಿತ್ಯ :  ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ, ಬ್ರಾಹ್ಮಣಗಳು, ಅರಣ್ಯಕಗಳು, ಉಪ ನಿಷದ್, ವೇದಾಂತ.
ವರ್ಣಗಳು :  ಬ್ರಾಹ್ಮಣ, ಕ್ಷತ್ರಿಯ (ರಾಜನ್), ವೈಶ್ಯ, ಶೂದ್ರ.
ಆಶ್ರಮಗಳ :  ಬ್ರಹ್ಮಚರ್ಯಾಶ್ರಮ, ಗೃಹಸ್ಥಾಶ್ರಮ, ವಾನಪ್ರಸ್ತಾಶ್ರಮ, ಸನ್ಯಾಸಾಶ್ರಮ.
ಸಮಾಜ :  ಮದುವೆ ಒಂದು ಧಾರ್ಮಿಕ ಪಿತೃ ಪ್ರಧಾನ ಕುಟುಂಬ ಅಸ್ತಿತ್ವದಲ್ಲಿತ್ತು.
ಸ್ತ್ರೀಯರ ಸ್ಥಾನಮಾನ ಉಚ್ಛ. ಹತ್ತಿ ಬಟ್ಟೆ. ಆಭರಣಗಳಿದ್ದವು. ಗರ್ಭಧಾರಣದಿಂದ ಅಂತ್ಯೆಷ್ಠಿಯವರೆಗೆ ವಿವಿಧ ಸಂಸ್ಕಾರಗಳು.
ಆರ್ಥಿಕ :  ಒಕ್ಕಲುತನ, ಪ್ರಾಣಿ ಸಾಕಾಣಿಕೆ, ವಸ್ತು ವಿನಿಯಮ ಪದ್ಧತಿ.
ಧಾರ್ಮಿಕ :  ಯಜ್ಞಗಳ ಆಚರಣೆ, ನಿಸರ್ಗದ ಶಕ್ತಿಗೊಬ್ಬ ದೇವತೆ, ಸೂರ್ಯ, ಅರುಣ, ಇಂದ್ರ, ವಾಯು
ಮುಂತಾದವರು.
(ಬ) ಪೂರ್ವಾರ್ಧ (ಕ್ರಿ. ಪೂ. 1000 ರಿಂದ 600)
ರಾಜರ ಮತ್ತು ಪುರೋಹಿತರ ಪ್ರಾಬಲ್ಯ ಹೆಚ್ಚಾಗಿತ್ತು. ಸ್ತ್ರೀಯರ ಸ್ಥಾನಮಾನದಲ್ಲಿ ಅವನತಿ ಪ್ರಾರಂಭ. ಉಳಿದಂತೆ ಹಿಂದಿನ ಪರಿಸ್ಥಿತಿಯೇ ಮುಂದುವರೆದಿತ್ತು.

2. ಮಹಾಕಾವ್ಯಗಳ ಕಾಲ

ರಾಮಾಯಣ, ಮಹಾಭಾರತ, ವಾಲ್ಮೀಕಿ, ವ್ಯಾಸರ ಕೃತಿಗಳು. ಕಾಲ ನಿರ್ಣಯವಾಗಿಲ್ಲ. ರಾಮಾಯಣ ಮೊದಲು ರಚಿತವಾಗಿದ್ದು, ನಂತರ ಮಹಾಗಾತ್ರದ ಮಹಾ ಭಾರತದ ರಚನೆಯಾಯಿತು. ಮಹಾಭಾರತದ ಭೀಷ್ಮ ಪರ್ವದಲ್ಲಿ ಭಗವದ್ಗೀತೆ ಇದೆ. ‘ಭಗವದ್ಗೀತೆಯಲ್ಲಿಲ್ಲದ ವಿಷಯ ಜಗತ್ತಿನಲ್ಲಿಲ್ಲ’ ಎನ್ನುವ ಹೇಳಿಕೆಯಿಂದ ಅದರ ಮಹತ್ವ ತಿಳಿಯಬಹುದು. ಎಲ್ಲ ವೃತ್ತಿಗಳು (ರಾಜರಿಂದ) ಅನುವಂಶಿಕ ವಾಗಿದ್ದವು. ಸ್ತ್ರೀಯರ ಸ್ಥಾನ ಅವನತಿ ಹೊಂದಿತ್ತು. ಪಾತಿವ್ರತ್ಯದ ಆದರ್ಶ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments