Tuesday, 19 June 2018

ಪ್ರಮುಖ ಸಂಘಟನೆಗಳ ಸ್ಥಾಪಕರು

ಪ್ರಮುಖ ಸಂಘಟನೆಗಳ ಸ್ಥಾಪಕರು
━━━━━━━━━━━━━━━━━━━━
✴ಬ್ರಹ್ಮ ಸಮಾಜ✴
━━━━✰✰✰━━━━
●ಸ್ಥಾಪಕ:-ರಾಜಾ ರಾಮ್ ಮೋಹನ್ ರಾಯ್

●ಸ್ಥಾಪನೆಯಾದ ವರ್ಷ:-1828

●1814 ರಲ್ಲಿ ಆತ್ಮೀಯ ಸಭಾ ಸ್ಥಾಪಿಸಿದರು

●1819 ರಲ್ಲಿ ಆತ್ಮೀಯ ಸಭಾ ಸ್ಥಗಿತವಾಯಿತು ನಂತರ 1828 ರಲ್ಲಿ ಬ್ರಹ್ಮ ಸಭಾ ಸ್ಥಾಪಿಸಿದರು

●1829ರಲ್ಲಿ ಬ್ರಹ್ಮ ಸಮಾಜ ಎಂದು ಮರು ನಾಮಕರಣಗೊಂಡಿತು

●ಸತಿ ಪದ್ದತಿ, ಜಾತಿ ಪದ್ದತಿ‌, ಮೂರ್ತಿ ಪೂಜೆ, ಬಹುಪತ್ನಿತ್ವ, ಬಾಲ್ಯ ವಿವಾಹ ಹಾಗೂ ಎಲ್ಲ ತರಹದ ಮೂಢನಂಬಿಕೆಗಳನ್ನು ಬ್ರಹ್ಮ ಸಮಾಜ ವಿರೋಧಿಸಿತು

●ಸತಿ ಪದ್ದತಿಯನ್ನು ನಿರ್ಮೂಲಗೊಳಿಸಲು ಬ್ರಿಟಿಷ್ ಸರ್ಕಾರವನ್ನು ಕೋರಿದರು. ಸತಿ ಪದ್ದತಿಯ ವಿರುದ್ದದ ರಾಜಾ ರಾಮ್ ಮೋಹನ್ ರಾಯರ ಹೋರಾಟದ ಫಲವಾಗಿ ಅಂದಿನ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕ್ ಸತಿ ಪದ್ದತಿಯು ಕಾನೂನು ಬಾಹಿರ ಎಂದು ಘೋಷಿಸಿದನು

●ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

●ಸಂವಾದ ಕೌಮುದಿ ಪತ್ರಿಕೆ ಆರಂಬಿಸಿ ಅದರ ಮೂಲಕ ಸಾಮಾಜಿಕ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಿದರು

●ಇವರು ಇಂಗ್ಲೀಷ್ ಶಿಕ್ಷಣವನ್ನು ಪ್ರತಿಪಾದಿಸಿದರು

●ವೇದಾಂತ ಕಾಲೇಜನ್ನು ಸ್ಥಾಪಿಸಿದರು
━━━━━━━━━━━━━━━━━━━━
✴ಸತ್ಯಶೋಧಕ ಸಮಾಜ✴
  ━━━━✰✰✰━━━━
●ಸ್ಥಾಪಕ:-ಮಹಾತ್ಮ ಜ್ಯೋತಿಬಾ ಪುಲೆ

●ಸ್ಥಾಪನೆಯಾದ ವರ್ಷ:-1873

●ಮಹಾರಾಷ್ರದಲ್ಲಿ ಆರಂಭವಾದ ಬ್ರಾಹ್ಮನೇತರ ಚಳುವಳಿ

●ಅಸ್ಪ್ರಷ್ಯ ಅನಾಥರಿಗಾಗಿ, ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು

● ಪುರೋಹಿತಶಾಹಿಯನ್ನು ಖಂಡಿಸಿದರು

●ಗುಲಾಮಗಿರಿ ಎಂಬ ಕೃತಿ ರಚಿಸಿದರು

●ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಪ್ರಾರಂಬಿಸಿದರು

●1863 ರಲ್ಲಿ ಬಾಲ ವಿಧವೆಯರ ಉದ್ಧಾರಕ್ಕಾಗಿ ಪುನರ್ ವಸತಿ ಕೇಂದ್ರ ತೆರೆದರು

●ಪುಲೆಯವರು ಅಂಬೇಡ್ಕರ್ ಅವರ ತಾತ್ವಿಕ ಗುರುವಾಗಿದ್ದರು
━━━━━━━━━━━━━━━━━━━━
✴ಪ್ರಾರ್ಥನಾ ಸಮಾಜ✴
  ━━━━✰✰✰━━━━
●ಸ್ಥಾಪಕ:- ಆತ್ಮರಾಮ್ ಪಾಂಡುರಂಗ

●ಸ್ಥಾಪನೆಯಾದ ವರ್ಷ:-1867

●ಇವರು ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

●ನಿರ್ಗತಿಕರಿಗೆ ಮತ್ತು ಅನಾಥರಿಗೆ ಆಶ್ರಮಗಳನ್ನು ಸ್ಥಾಪಿಸಿದರು

●ವಿಧವೆಯರ ಉದ್ಧಾರಕ್ಕಾಗಿ ಶಾಲೆಗಳನ್ನು ತೆರೆದರು
━━━━━━━━━━━━━━━━━━━━
✴ಆರ್ಯ ಸಮಾಜ✴
━━━━✰✰✰━━━━
●ಸ್ಥಾಪಕ:-ದಯಾನಂದ್ ಸರಸ್ವತಿ

●ಸ್ಥಾಪನೆಯಾದ ವರ್ಷ:-1875

●ಇವರ ಮೊದಲ ಹೆಸರು ಮೂಲಶಂಕರ 

●ವೇದಗಳಿಗೆ ಹಿಂದಿರುಗಿ ಎಂಬುದು ಇವರ ಕರೆಯಾಗಿತ್ತು

●ಮೂರ್ತಿ ಪೂಜೆ, ಅಸ್ಪ್ರಶ್ಯತೆ, ಬಾಲ್ಯ ವಿವಾಹ, ಜಾತಿ ಪದ್ದತಿಗಳನ್ನು ಖಂಡಿಸಿದರು

●ಅಂತರ್ಜಾತಿ ವಿವಾಹ ಹಾಗೂ ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

●ಏಕ ದೇವತಾರಾಧನೆಯನ್ನು ಪ್ರತಿಪಾದಿಸಿದರು

●ಸತ್ಯಾರ್ಥ ಪ್ರಕಾಶ ಎಂಬ ಕ್ರತಿ ರಚಿಸಿದರು

●ಆರ್ಯ ಸಮಾಜದ ಸಮಾಜದ ನಾಯಕರಾದ ಲಾಲಾ ಹಂಸರಾಜ್ ಅವರು ಲಾಹೋರ್ ರಲ್ಲಿ -ದಯಾನಂದ್ ಆಂಗ್ಲೋ ವೇದಿಕ್ ಶಾಲೆಯನ್ನು ಪ್ರಾರಂಭಿಸಿದರು(1886).
ಮುಂದುವರೆಯುವುದು........
━━━━━━━━━━━━━━━━━━━━

ಭೌಗೋಳಿಕ ಅನ್ವೇಷಣೆಗಳು

ಪ್ರಮುಖ ಮಾಹಿತಿ
━━━━━━━━━━━━━━━━━
# ಮಾರ್ಕೊಪೊಲೋ :

ಜನನ – ಕ್ರಿ.ಶ.1254 /
ಮರಣ – ಕ್ರಿ.ಶ. 1324
ದೇಶ – ವೆನಿಷಿಯಾ,ಇಟಲಿ
ವೃತ್ತಿ – ಮುತ್ತು ರತ್ನ  ವ್ಯಾಪಾರಿ
ಪ್ರಮುಖ ಕೃತಿ- ಮಾರ್ಕೊಪೊಲೋ ದಿ ವೆನಿಸ್
ಮಾರ್ಕೊಪೋಲೊ ಮುತ್ತು ರತ್ನಗಳ ವ್ಯಾಪಾರಕ್ಕೆಂದು ಚೀನಾಕೆ ಹೋದನು. ಅಲ್ಲಿನ ದೊರೆ ಕುಬ್ಲಾಯ್ ಖಾನನ ಆಸ್ಥಾನದಲ್ಲಿ ಸೇವೆಗೆ ಸೇರಿಕೊಂಡನು.ನಂತರ ಜಪಾನ ಹಾಗೂ ಭಾರತಕೆ ಭೇಟಿ ನೀಡಿ ಅಪಾರ ಸಂಪತ್ತಿನೊಂದಿಗೆ ತಾಯ್ನಾಡಿಗೆ ತೆರಳಿದ.ತನ್ನ ಅನುಭವಗಳನ್ನು ಮಾರ್ಕೊಪೊಲೊ ದಿ ವೆನಿಸ್ ಎಂಬ ಗ್ರಂಥದಲ್ಲಿ ದಾಖಲಿಸಿದನು.ಈ ಅನುಭವಗಳೆ ಮುಂದಿನ ಸಮುದ್ರಯಾನಿಗಳಿಗೆ ಸ್ಪೂರ್ತಿ ನೀಡಿದವು.
━━━━━━━━━━━━━━━━━
# ಹೇನ್ರಿ ನ್ಯಾವಿಗೇಟರ್ :

ಜನನ- ಕ್ರಿ.ಶ.1394 / ಜನ್ಮಸ್ಥಳ- ಪೋರ್ಚುಗಲ್
ವೃತ್ತಿ- ರಾಜ
ಈತ ನಾವಿಕನಲ್ಲದಿದ್ದರೂ ಲಿಸ್ಟನ್ ನಲ್ಲಿ ನಾವಿಕ ತರಬೇತಿ ಶಾಲೆಯನ್ನು ತೆರೆದನು.ಅಲ್ಲಿಗೆ ನಕ್ಷೆ ತಯಾರಕರು,ಭೌಗೊಳಿಕ ತಜ್ಞರು,ನಾವಿಕರನ್ನು ಆಹ್ವಾನಿಸಿದನು.ಆಫ್ರಿಕ ಬಳಸಿ ಪೂರ್ವಕ್ಕೆ ಹೋದಲ್ಲಿ ಭಾರತ ಮತ್ತು ಚೀನಾ ಗಳಿಗೆ ಭೇಟಿ ನೀಡಬಹುದು ಎಂದು ನಂಬಿದ್ದನು.ಅದಕ್ಕಾಗಿಯೆ ಕ್ಯಾರವಲ್ ಎಂಬ ಬಲಿಷ್ಠ ಹಡಗು ನಿರ್ಮಿಸಿ ಅದರಲ್ಲಿ ವರ್ತಕರು.ಯೋಧರು,ಧರ್ಮಪ್ರಚಾಕರನ್ನು ಕಳುಹಿಸಿದ.ಅವರು ಪಶ್ಚಿಮ ಆಫ್ರಿಕಾದ ಗಿನಿಯಾ ತೀರ,ಮೆಡಿರಾ ಮತ್ತು ಅಜೊರೆಸ್ ದ್ವೀಪಗಳನ್ನು ಶೋಧಿಸಿದರು.ಮತ್ತೊಂದು ಶಿಷ್ಯರ ತಂಡ ಕೇಫ ಆಫ ಗುಡ್ ಹೋಪ್ ಸಂಶೋಧಿಸಿತು.
━━━━━━━━━━━━━━━━━
# ವಾಸ್ಕೋಡಿಗಾಮ : 

ಜನನ- ಕ್ರಿ.ಶ.1469 /
ಮರಣ- ಕ್ರಿ.ಶ.1525
ಜನ್ಮಸ್ಥಳ- ಲಿಸ್ಟನ್
ವೃತ್ತಿ- ನಾವಿಕ
ಭಾರತವನ್ನು ಸಂಶೋಧಿಸಬೇಕೆಂದು ಹಂಬಲದಿಂದ ನಾಲ್ಕು ಹಡಗುಗಳೊಂದಿಗೆ ಪೊರ್ಚುಗಲ್ ನಿಂದ ಪ್ರಯಾಣ ಬೆಳೆಸಿದನು.ವಾಸ್ಕೊಡಿಗಾಮ ಆಫ್ರಿಕಾದ ಪಶ್ಚಿಮ ಕರಾವಳಿ ಯಲ್ಲಿ ಸಂಚರಿಸಿ ಕೇಫ ಆಫ ಗುಡ್ ಹೋಪ್ ತಲುಪಿದ.ಅಲ್ಲಿಂದ ಮುಂದೆ ಜಾಂಜೀಬಾರ್ ಮೂಲಕ ಹಾಯ್ದು 1498 ನೆ ಮೇ 17 ರಂದು ಭಾರತವನ್ನು ಸಂಶೋಧಿಸಿದನು.
━━━━━━━━━━━━━━━━━
# ಕೆಬ್ರಾಲ್ : 

ಜನನ – ಕ್ರಿ.ಶ.1467 /
ಮರಣ- ಕ್ರಿ.ಶ.1520
ಜನ್ಮಸ್ಥಳ – ಪೋರ್ಚುಗಲ್
ವೃತ್ತಿ – ಸಮುದ್ರಯಾನಿ ಮತ್ತು ಅನ್ವೇಷಕ
ಈತನು ದಕ್ಷಿಣ ಅಮೇರಿಕವನ್ನು ಕ್ರಿ.ಶ.1500 ರಲ್ಲಿ ಶೋಧಿಸಿದನು.ಈತ ಬ್ರೆಜಿಲ್ ನ್ನು ಪೋರ್ಚುಗೀಸರಿಗೆ ಸೇರಿದ ದೇಶವೆಂದು ಘೋಷಿಸಿದನು.ಈತನು ಭೌತಶಾಸ್ತ್ರ, ರೇಖಾಗಣಿತ,ಗಣಿತ,ಕಾರ್ಟೊಗ್ರಾಫಿ ಮತ್ತು ಅಸ್ಟ್ರೋನಾಮಿ ಬಲ್ಲವನಾಗಿದ್ದನು.ಎಪ್ರೀಲ್ 23 ಕ್ರಿ.ಶ.1500 ರಂದು ಬ್ರೆಜಿಲ್ ಕಡಲ ತೀರದಲ್ಲಿ ಬಂದಿಳಿದನು.
━━━━━━━━━━━━━━━━━
# ಕ್ರಿಸ್ಟೋಫರ್ ಕೋಲಂಬಸ್ : 

ಜನನ- ಕ್ರಿ.ಶ.1446 /
ಮರಣ- ಕ್ರಿ.ಶ.1506
ಜನ್ಮಸ್ಥಳ – ಜಿನೀವಾ ಇಟಲಿ
ವೃತ್ತಿ – ಅನ್ವೇಷಕ
ಭಾರತಕ್ಕೆ ಹೊಸ ಮಾರ್ಗವನ್ನು ಕಂಡುಹಿಡಿಯಬೇಕೆಂಬ ಹಂಬಲದಿಂದ ತನ್ನ ಸಹಚರರೊಂದಿಗೆ 1492 ನೆ ಅಗಷ್ಟ 23 ರಂದು ಅಟ್ಲಾಂಟಿಕ್ ಸಾಗರದ ಪಶ್ಚಿಮಾಭಿಮುಖವಾಗಿ ಪ್ರಯಾಣ ಬೆಳೆಸಿದ.ಆದರೆ ಈತ ತಲುಪಿದ್ದು ವೆಸ್ಟ ಇಂಡೀಸ್ ದ್ವೀಪಗಳನ್ನು ನಂತರ ಅಮೆರಿಕ, ಕೆರೆಬಿಯನ್ ದ್ವೀಪಗಳು,ವೆನೆಜುವೆಲಾ, ಜಮೈಕಾ,ಟ್ರಿನಿಡಾಡ್,ನಿಕರಾಗುವಾ,ಕೊಸ್ಟರಿಕಾ,ಹೊಂಡುರಾಸ್,ಕ್ಯುಬಾ ಮತ್ತು ಹೈಟಿ ದ್ವೀಪಗಳನ್ನು ಶೋಧಿಸಿದ.
━━━━━━━━━━━━━━━━━
# ಬಲ್ ಬೋವಾ : 

ಜನನ- ಕ್ರಿ.ಶ.1475 /
ಮರಣ- ಕ್ರಿ.ಶ.1519
ಜನ್ಮಸ್ಥಳ- ಬಡಾಜೋಝ ಸ್ಪೇನ್
ವೃತ್ತಿ – ಸಮುದ್ರಯಾನಿ
ಈತ ಒಬ್ಬ ಸೈನಿಕ ಮತ್ತು ನಾವಿಕ.ಈತ ಪನಾಮಾದ ಇಸ್ತಮಸ್ ನ್ನು  ತಲುಪಿ ಮುಂದೆ ಸಾಗಿ 1513 ರಲ್ಲಿ ಪೆಸಿಫಿಕ್ ಸಾಗರವನ್ನು ಶೋಧಿಸಿದನು.ಫೆಸಿಫಿಕ್ ತಲುಪಿದ ಪ್ರಥಮ ಯುರೋಪಿಯನ್ ಎಂಬ ಕೀರ್ತಿ ಪಡೆದನು.ಈತ ಕ್ರಿ.ಶ.1500 ರಲ್ಲಿ ಹೊಸ ವಿಶ್ವದೆಡೆಗೆ ಪಯಣಿಸಿದ.ಸಾಂತಾ ಮರಿಯಾ ಲಾ ಆಂಟಿಗು ವಾ ಡಲ್ ಡೆರಿಯನ್ ವಸಾಹತನ್ನು 1510 ರಲ್ಲಿ ಅನ್ವೇಷಿಸಿದ.ಅಮೆರಿಕದ ನೆಲದಲ್ಲಿ ವಸಾಹತನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ ಎಂಬ ಖ್ಯಾತಿ ಪಡೆದ.
━━━━━━━━━━━━━━━━━
# ಅಮೆರಿಗೊ ವೆಸ್ಪುಸಿ : 

ಜನನ- ಕ್ರಿ.ಶ.1451 /
ಮರಣ – ಕ್ರಿ.ಶ.1512
ಜನ್ಮಸ್ಥಳ- ಫ್ಲಾರೆನ್ಸ ಇಟಲಿ
ವೃತ್ತಿ  – ಅನ್ವೇಷಕ
ಈತ ಇಟಲಿಯ ಫ್ಲಾರೆನ್ಸ್ ನಗರದವನು.ಈತ ಕೊಲಂಬಸ್ ಕಂಡು ಹಿಡಿದ ಹೊಸ ನಾಡನ್ನು ಅಮೆರಿಕ ಎಂದು ಕರೆದನು.ಈತ ದಕ್ಷಿಣ ಅಮೆರಿಕದ ಪೂರ್ವ ಕರಾವಳಿ, ಓರಿನೋಕೊ ನದಿ,ಪ್ಲೇಟ್ ನದಿ ಮತ್ತು ಮೊರಾಕಿಬೋ ಸರೋವರದವರೆಗಿನ ಪ್ರದೇಶಗಳನ್ನು ಸಂಶೋಧಿಸಿದನು.ಅಮೆರಿಕದ ಭೂಗೋಳವನ್ನು ಪೂರ್ಣವಾಗಿ ಪರಿಚಯಿಸಿದ್ದರಿಂದ ಅದನ್ನು ಇವನ ಹೆಸರಿನ ಮೇಲೆ ಅಮೆರಿಕ ಎಂದು ಕರೆಯಲಾಯಿತು.
━━━━━━━━━━━━━━━━━
# ಫರ್ಡಿನೆಂಡ್ ಮೆಗಲನ್ :

ಜನನ – ಕ್ರಿ.ಶ.1480 /
ಮರಣ – ಕ್ರಿ.ಶ. 1521
ಜನ್ಮಸ್ಥಳ – ಪೋರ್ಚುಗಲ್
ವೃತ್ತಿ – ಅನ್ವೇಷಣೆ
ಈತ ಸ್ಪೇನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ.ಅಲ್ಲಿನ ರಾಜವಂಶದ ಚಾರ್ಲ್ಸನ ಸಹಾಯದೊಂದಿಗೆ ಹೊಸ ಅನ್ವೇಷಣೆಯಲ್ಲಿ ತೊಡಗಿದ. ಕ್ಯಾಡಿಜ್ ನಿಂದ ಪ್ರಯಾಣ ಹೊರಟ ಈತ ಅಟ್ಲಾಂಟಿಕ್ ಸಾಗರದ ಮೂಲಕ ದಕ್ಷಿಣ ಅಮೇರಿಕದ ಪೂರ್ವ ಕರಾವಳಿ ದಾಟಿ ಶಾಂತಸಾಗರ ತಲುಪಿದ.ಅಲ್ಲಿಂದ ಫಿಲಿಫೈನ್ಸ  ದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಮೂಲನಿವಾಸಿಗಳಿಂದ ಹತನಾದ.ಬದುಕುಳಿದ ಇತನ 18 ಸಹಚರರು ಈಸ್ಟ ಇಂಡೀಸ್ ,ಇಂಡೋನೇಷ್ಯಾ. ಬೋರ್ನಿಯಾ,ಹಿಂದೂ ಮಹಾಸಾಗರ,ಕೇಫ ಆಫ ಗುಡ್ ಹೋಪ್ ಭೂಶಿರ ದಾಟಿ ಪುನಃ ಸ್ಪೇನ್ ತಲುಪಿದರು.ಕಾರಣ ವಿಶ್ವವನ್ನು ಮೊದಲ ಬಾರಿಗೆ ಪ್ರದಕ್ಷಿಣೆ ಹಾಕಿದ ಕೀರ್ತಿ ಪಡೆಯುವ ಜೊತೆಗೆ ಭೂಮಿ ಗೋಳವಾಗಿದೆ ಎಂಬುವುದನ್ನು ಮನವರಿಕೆ ಮಾಡಿಕೊಟ್ಟರು.
━━━━━━━━━━━━━━━━━

Saturday, 16 June 2018

ಜಲಿಯನ್ ವಾಲಾಬಾಗ್ ಸ್ಮರಣೆ

*✴️ಜಲಿಯನ್ ವಾಲಾಬಾಗ್ ಸ್ಮರಣೆ️✴️*

*✴️Jallialwalabagh Massacre✴️*

ಏಪ್ರಿಲ್ 13, ಅಮೃತಸರದ ಜಲಿಯನ್ ವಾಲಾ ಬಾಗಿನಲ್ಲಿ ನಮಗಾಗಿ ಅಸಂಖ್ಯಾತ ಸ್ತ್ರೀ ಪುರುಷ ಮಕ್ಕಳು ಜೀವತೆತ್ತ ದಿನ.  ಅವರಿಗಾಗಿ ಮನಮಿಡಿಯುವ ಕ್ಷಣವಿದು.

*ಏಪ್ರಿಲ್ 13, 1919ರಲ್ಲಿ* ಈ ಚಿತ್ರದಲ್ಲಿ ತೋರಿರುವ ಕಿರು ಏಕ  ಪ್ರವೇಶದಲ್ಲಿ ಒಳಗೆ ಬಂದು ಸಭೆ ಸೇರಿದ್ದವರು  *10,000ಕ್ಕೂ* ಹೆಚ್ಚು ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು.   ಅವರಿಗೆ ಹೊರಹೋಗಲಿಕ್ಕೆ ಸಹಾ  ಯಾವುದೇ ಆಸ್ಪದವಿಲ್ಲದ ಹಾಗೆ, *ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್*ಎಂಬ ಅಯೋಗ್ಯ ಅಧಿಕಾರಿಯ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು *15 ನಿಮಿಷಗಳ* ಕಾಲ ಗುಂಡಿನ ಮಳೆಗರೆದವು.  ಈ ಗುಂಡಿನ ಸುರಿಮಳೆಯಲ್ಲಿ *ಕನಿಷ್ಠ 379 ಜನ ಮೃತರಾಗಿ 1200ಕ್ಕೂ* ಹೆಚ್ಚು ಮಂದಿ ಗಾಯಗೊಂಡರು.  ಅನೇಕರು ಈ ಭಾವಿಗೆ ಹಾರಿದ ಘಟನೆ ಕೂಡಾ ನಡೆಯಿತು.  ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು.

ಇಂದು ನಮಗಾಗಿ ಜೀವತೇಯ್ದ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಜೊತೆಗೆ, ನಮಗಾಗಿ ತಮ್ಮ ಜೀವವನ್ನೂ ಬಲಿಕೊಟ್ಟು ಅಂದಿನ ಸಮಾಜ ನಮಗೆ ಕೊಡುಗೆಯಾಗಿ  ಕೊಟ್ಟ ಈ ಸ್ವಾತಂತ್ರ್ಯಕ್ಕೆ ನಿಷ್ಠಾವಂತವಾಗಿರಬೇಕಾಗಿದೆ.

*🇮🇳ಸಮಾವೇಶ:*

೧೯೧೯, ಏಪ್ರಿಲ್ ೧೩ರಂದು,ಬ್ರಿಟಿಷರು ಜಾರಿಗೆ ತಂದ ರೌಲಟ್ ಆಕ್ಟನ್ನು ವಿರೊಧಿಸಿ ಪಂಜಾಬ್ ರಾಜ್ಯದ ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯ‍ನ್ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು, ಮುಖ್ಯವಾಗಿ ಪಂಜಾಬಿ ನಾಗರೀಕರು, ಸಮಾವೇಶಗೊಂಡಿದ್ದರು. ಅದು ಸಿಖ್ಖರ ಪವಿತ್ರ ದಿನಗಳಲ್ಲೊಂದಾದ ಬೈಸಾಖಿ ದಿನ.ಆ ಪವಿತ್ರದಿನದಂದು ಬೈಸಾಖಿ ಹಬ್ಬವನ್ನು ಆಚರಿಸಲು ಅಮೃತಸರದಲ್ಲಿ ಸಮಾವೇಶಗೊಳ್ಳುವುದು ಸಂಪ್ರದಾಯವಾಗಿ ರೂಪುಗೊಂಡಿತ್ತು. ಸಂವಹನ ತಂತ್ರಜ್ಞಾನವು ತೀರಾ ಹಿಂದುಳಿದಿದ್ದ ಪಂಜಾಬಿನಲ್ಲಿ, ಗ್ರಾಮೀಣ ಪ್ರದೇಶದಿಂದ ಅಮೃತಸರಕ್ಕೆ ಬರುತ್ತಿದ್ದ ಜನರಿಗೆ ಮಾಹಿತಿಯು, ಸಮಾಚಾರಗಳು ಲಭ್ಯವಾಗಿರಲಿಲ್ಲ. ಶಾಸನಬದ್ಧವಾಗಿ ಅಮೃತಸರದಲ್ಲಿ ಐದಕ್ಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ (ಇದನ್ನು, 'ಮಾರ್ಷಲ್ ನಿಯಮ' ಎನ್ನುತ್ತಿದ್ದರು). ಆದ್ದರಿಂದ ಅಂದು ನಡೆದ ಸಮಾವೇಶ, ನಿಯಮದ ಉಲ್ಲಂಘನೆಯಾಗಿತ್ತು ಎನ್ನಲಾಗುತ್ತದೆ.

*🇮🇳ಹತ್ಯಾಕಾಂಡ:*

ತೊಂಬತ್ತು (೯೦) ಸೈನಿಕರಿದ್ದ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ತುಕಡಿಯೊಂದು ಉದ್ಯಾನವನಕ್ಕೆ ಎರಡು ಶಸ್ತ್ರಸಜ್ಜಿತ ಕಾರುಗಳೊಂದಿಗೆ ಬಂದಿತು. ಮೆಷಿನ್ಗನ್ ‍ಗಳನ್ನು ಅಳವಡಿಸಲಾಗದ್ದ ಆ ವಾಹನಗಳು, ಉದ್ಯಾನದ ಕಡಿದಾದ ಬಾಗಿಲಿನಿಂದ ಬರಲು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕರಾದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಅವರು, ಉದ್ಯಾನದೊಳಗೆ ಕಾಲಿಡುತ್ತಲೇ, ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ, ಗುಂಪು ಚದುರುವಂತೆ ಯಾವೊಂದು ಆದೇಶವನ್ನೀಯದೇ, ಹಠಾತ್ತಾಗಿ ಗುಂಡಿನ ಮಳೆಗರೆವಂತೆ ತಮ್ಮ ತುಕಡಿಗೆ ಆದೇಶವನ್ನಿತ್ತರು. ಅದರಲ್ಲಿಯೂ ವಿಶೇಷವಾಗಿ, ಜನಸಾಂದ್ರತೆ ಎಲ್ಲಿ ಹೆಚ್ಚಾಗಿರುವುದೋ ಅತ್ತಕಡೆ ಗುಂಡಿನ ದಾಳಿ ಕೇಂದ್ರೀಕೃತವಾಗುವಂತೆ ಆದೇಶಿಸಿದರು.ಗುಂಡಿನ ದಾಳಿಯು ಸಂಜೆ ೧೭:೧೫ಕ್ಕೆ ಪ್ರಾರಂಭವಾದದ್ದು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ, ಸತತವಾಗಿ ನಡೆಯಿತು. ಸುತ್ತಲೂ ಇಟ್ಟಿಗೆ ಗೋಡೆಗಳಿಂದ, ಕಟ್ಟಡಗಳಿಂದ ಆವೃತವಾಗಿದ್ದ ಉದ್ಯಾನವನಕ್ಕೆ ಇದ್ದದ್ದು ಐದು ಕಡಿದಾದ ದ್ವಾರಗಳು ಮಾತ್ರ. ಅದರಲ್ಲಿ ಬಹುತೇಕ ಶಾಶ್ವತವಾಗಿ ಮುಚ್ಚಲ್ಪಟ್ಟವಂಥವು. ತುಕಡಿಯಿದ್ದ ದ್ವಾರದ ಹೊರತಾಗಿ ಇನ್ನೊಂದೇ ದ್ವಾರವು ಮಾರ್ಗವಾಗಿ ಉಳಿದಿದ್ದರಿಂದ, ಕಂಗಾಲಾದ ಜನರು ಗೋಡೆಯನ್ನು ಹತ್ತಿ ಹಾರಲು ಪ್ರಯತ್ನಿಸಿದರು.ಬಹಳಷ್ಟು ಜನರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಬಾವಿಯೊಳಗೆ ಹಾರಿದರು. ಈ ಹತ್ಯಾಕಾಂಡ ಸ್ಮಾರಕದಲ್ಲಿನ ಅಂಶವೊಂದರ ಪ್ರಕಾರ, ಬಾವಿಯೊಂದರಿಂದಲೇ ಸುಮಾರು ೧೨೦ ಶವಗಳನ್ನು ಹೊರತೆಗೆಯಲಾಗಿತ್ತು. ಹತ್ಯಾಕಾಂಡದಿಂದ ನೂರಾರು ಜನರು ಸಾವನಪ್ಪಿದರಲ್ಲದೆ, ಸಾವಿರಾರು ಮಂದಿ ಗಾಯಗೊಂಡರು. ಸರ್ಕಾರಿ ಮೂಲಗಳ ಪ್ರಕಾರ ೩೭೯ ಮಂದಿ ಸಾವನಪ್ಪಿದರಾದರೂ, ಆದರೆ ಸಾವಗೀಡಾದವರ ನಿಜವಾದ ಸಂಖ್ಯೆ ಇನ್ನು ಹೆಚ್ಚಿತ್ತು ಎನ್ನಲಾಗುತ್ತದೆ.ಕರ್ಫ್ಯು ವಿಧಿಸಿದ ಕಾರಣ, ಗಾಯಗೊಂಡ ಹಲವರನ್ನು ಹತ್ಯಾಕಾಂಡದ ಸ್ಥಳದಿಂದ ಇತರೆಡೆಗೆ ಸ್ಥಳಾಂತರಿಸಲಾಗಲಿಲ್ಲ. ನಿಜವಾದ ಸಾವಿನ ಸಂಖ್ಯೆಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಈ ಘಟನೆ ನಡೆದ ಬಳಿಕ, ಬ್ರಿಟಿಷ್ ಸೇನೆಗೆ, ವಿದ್ರೋಹಿ ಸೈನ್ಯವು ಎದುರಾದುದರಿಂದ, ಅವರಿಗೆ ತಕ್ಕ ಪಾಠ ಕಲಿಸಿದ್ದಾಗಿ, ಜನರಲ್ ಡೈಯರನು ತನ್ನ ಮೇಲಧಿಕಾರಿಗಳಿಗೆ ವರದಿಯೊಪ್ಪಿಸಿದನು.ಇದಕ್ಕೆ ಉತ್ತರಿಸಿದ ಪಂಜಾಬ್‌ನ ಅಂದಿನ ಲೆಫ್ಟಿನೆಂಟ್-ಗವರ್ನರ್ಆದ ಮೈಕಲ್ ಓ'ಡ್ವಾಯರ್,ಅವರಿಗೆ ತಕ್ಕ ಪಾಠ ಕಲಿಸಿದಿರಿ, ಲೆಫ್ಟಿನೆಂಟ್-ಗವರ್ನರ ಇದನ್ನು ಅನುಮೋದಿಸುತ್ತಾರೆ ಎಂದು ತಂತಿಯ ಮೂಲಕ ಜನರಲ್ ಡೈಯರ್‌ಗೆ ಸಂದೇಶ ಕಳುಹಿಸಿದರು. ಮೈಕಲ್ ಓ'ಡ್ವಾಯರ್ನ ಇಚ್ಚೆಯಂತೆ ಈ ಘಟನೆಯ ನಂತರ, ಅಂದಿನ ವೈಸರಾಯ್ಯಾಗಿದ್ದ, ಫ್ರೆಡ್ರಿಕ್ ತೆಸಿಂಗರ್, ಅಮೃತಸರ ಹಾಗು ಅದರ ಸುತ್ತ-ಮುತ್ತ ಮಿಲಿಟರಿ ಆಡಳಿತವನ್ನು ಹೇರುವಂತೆ ಆದೇಶಿಸಿದನು.ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ಹಂಟರ್ ಆಯೋಗ ಅನ್ನು ಸ್ಥಾಪಿಸುವಂತೆ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗೊ ನಿರ್ಧರಿಸಿದನು. ಈ ಆಯೋಗದೆದುರು ಮೈಕಲ್ ಓ'ಡ್ವಾಯರ್ನನ್ನು ಕರೆತರಲಾಯಿತು. ವಿಚಾರಣೆಯ ವೇಳೆ, ಜಲಿಯನ್‌ವಾಲ ಬಾಗ್ ನಲ್ಲಿ ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗ್ಗೆ ತನಗೆ ಅಂದಿನ ದಿನ ೧೨.೪೦ರ ವೇಳೆಗೆ ತಿಳಿಯಿತಾದರೂ, ಇದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲವೆಂದು, ಡ್ವಾಯರ್ ಒಪ್ಪಿಕೊಂಡನು.ಇದಲ್ಲದೆ, ತಾನು ಜಲಿಯನ್‌ವಾಲ ಬಾಗ್ ‌ಗೆ ಗುಂಡು ಹಾರಿಸುವ ಉದ್ದೇಶದಿಂದಲೆ ತೆರಳಿದ್ದಾಗಿ ತಿಳಿಸಿದನು. "ಜಲಿಯನ್‌ವಾಲಾ ಬಾಗನಲ್ಲಿ ಸೇರಿದ ಜನರನ್ನು ಚದುರಿಸಲು, ಗುಂಡಿನ ಅವಶ್ಯಕತೆ ಇರಲ್ಲಿಲವಾದರೂ, ತಾನು ಆ ಕ್ರಮ ಕೈಗೊಂಡಿರದಿದ್ದರೆ, ಜನರು ಮತ್ತೆ ಗುಂಪು ಸೇರಿ ತನ್ನನ್ನು ನೋಡಿ

ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು

━━━━━━━━━━━━━━━━━━━━
🛃ಭಾರತದ ಇತಿಹಾಸ 🛃
━━━━━━━━━━━━━━━━━━━━
👉ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು
━━━━━━━━━━━━━━━━━━━━
👉ಮುಖ್ಯಾಂಶಗಳು:

🛃• ಮೊದಲನೆ ಆಂಗ್ಲೋ-ಮೈಸೂರು ಯುದ್ಧ ಮದ್ರಾಸ ಒಪ್ಪಂದದೊಂದಿಗೆ ಮುಕ್ತಾಯವಾಯಿತು.

🛃• ಪ್ರೆಂಚರ ವಸಾಹತು ಮಾಹೆ
• ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದವರು ಚೆಂಗಾಳ್ವರು

🛃• 17ನೇ ಶತಮಾನದ ಪ್ರಾರಂಬದಲ್ಲಿ ದಕ್ಷಿಣ ಕನ್ನಡವನ್ನು ಇಕ್ಕೇರಿಯ ವೆಂಕಟಪ್ಪ ನಾಯಕನು ವಶಪಡಿಸಿಕೊಂಡನು.

🛃• ಮೊದಲ ಆಂಗ್ಲೋ-ಮೈಸೂರು ಯುದ್ಧ : ಮದ್ರಾಸ ಒಪ್ಪಂದ : :📚

🛃2ನೇ ಆಂಗ್ಲೋ-ಮೈಸೂರು ಯುದ್ಧ : ಮಂಗಳೂರು ಒಪ್ಪಂದ📚

🛃• ಕ್ರಿಶ 1781 ರಲ್ಲಿ ಸರ್ ಐರ್‍ಕೂಟ್ ನೇತೃತ್ವದ ಇಂಗ್ಲಿಷ ಸೈನ್ಯವು ಹೈದರಾಲಿಯನ್ನು ಸೋಲಿಸಿತು.
• ಮಂಗಳೂರ ಒಪ್ಪಂದ : 1784 : :📚

🛃 ಶ್ರೀರಂಗಪಟ್ಟಣ ಒಪ್ಪಂದ : ಕ್ರಿಶ 1792
• ಮೂರನೇ ಆಂಗ್ಲೋ-ಮೈಸೂರು ಯುದ್ದಕ್ಕೆ ಕಾರಣ.

🛃ಟಿಪ್ಪು ಇಂಗ್ಲಿಷರ ಸ್ನೇಹಿತ ತಿರುವಾಂಕೂರಿನ ಅರಸನ ಮೇಲೆ ದಾಳಿಮಾಡಿದ್ದು.

🛃• ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು ಲಾರ್ಡ ವೆಲ್ಲಸ್ಲಿ

🛃• ಟಿಪ್ಪುವಿನ ನಂತರ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದ ಒಡೆಯರು ಮುಮ್ಮಡಿ ಕೃಷ್ನರಾಜ ಒಡೆಯರು.

🛃• ಮೈಸೂರು ಒಡೆಯರ ಆಳ್ವಿಕೆಯನ್ನು ಆರಂಭಿಸಿದವರು ಯದುರಾಯ & ಕೃಷ್ಣರಾಯ

🛃• ಮೈಸೂರು ಸಂಸ್ಥಾನದ ಕೊನೆಯ ಒಡೆಯರು ಜಯಚಾಮರಾಜ ಒಡೆಯರು

🛃• ಮದ್ರಾಸ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು ಬಳ್ಳಾರಿ & ದಕ್ಷಿಣ ಕನ್ನಡ

🛃• ಭಾರತದ ಹೊರಗೆ ಕಾಲಿಟ್ಟ ಮೊದಲ ದೇಶಿಯ ದೊರೆ ಕೊಡಗಿನ ಚಿಕ್ಕ ವೀರಗಾಸೆ.
━━━━━━━━━━━━━━━━━━━━

Monday, 11 June 2018

ಜಲಿಯನ್ ವಾಲಾಬಾಗ್ ಸ್ಮರಣೆ

*✴️ಜಲಿಯನ್ ವಾಲಾಬಾಗ್ ಸ್ಮರಣೆ️✴️*

*✴️Jallialwalabagh Massacre✴️*

ಏಪ್ರಿಲ್ 13, ಅಮೃತಸರದ ಜಲಿಯನ್ ವಾಲಾ ಬಾಗಿನಲ್ಲಿ ನಮಗಾಗಿ ಅಸಂಖ್ಯಾತ ಸ್ತ್ರೀ ಪುರುಷ ಮಕ್ಕಳು ಜೀವತೆತ್ತ ದಿನ.  ಅವರಿಗಾಗಿ ಮನಮಿಡಿಯುವ ಕ್ಷಣವಿದು.

*ಏಪ್ರಿಲ್ 13, 1919ರಲ್ಲಿ* ಈ ಚಿತ್ರದಲ್ಲಿ ತೋರಿರುವ ಕಿರು ಏಕ  ಪ್ರವೇಶದಲ್ಲಿ ಒಳಗೆ ಬಂದು ಸಭೆ ಸೇರಿದ್ದವರು  *10,000ಕ್ಕೂ* ಹೆಚ್ಚು ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು.   ಅವರಿಗೆ ಹೊರಹೋಗಲಿಕ್ಕೆ ಸಹಾ  ಯಾವುದೇ ಆಸ್ಪದವಿಲ್ಲದ ಹಾಗೆ, *ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್*ಎಂಬ ಅಯೋಗ್ಯ ಅಧಿಕಾರಿಯ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು *15 ನಿಮಿಷಗಳ* ಕಾಲ ಗುಂಡಿನ ಮಳೆಗರೆದವು.  ಈ ಗುಂಡಿನ ಸುರಿಮಳೆಯಲ್ಲಿ *ಕನಿಷ್ಠ 379 ಜನ ಮೃತರಾಗಿ 1200ಕ್ಕೂ* ಹೆಚ್ಚು ಮಂದಿ ಗಾಯಗೊಂಡರು.  ಅನೇಕರು ಈ ಭಾವಿಗೆ ಹಾರಿದ ಘಟನೆ ಕೂಡಾ ನಡೆಯಿತು.  ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು.

ಇಂದು ನಮಗಾಗಿ ಜೀವತೇಯ್ದ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಜೊತೆಗೆ, ನಮಗಾಗಿ ತಮ್ಮ ಜೀವವನ್ನೂ ಬಲಿಕೊಟ್ಟು ಅಂದಿನ ಸಮಾಜ ನಮಗೆ ಕೊಡುಗೆಯಾಗಿ  ಕೊಟ್ಟ ಈ ಸ್ವಾತಂತ್ರ್ಯಕ್ಕೆ ನಿಷ್ಠಾವಂತವಾಗಿರಬೇಕಾಗಿದೆ.

*🇮🇳ಸಮಾವೇಶ:*

೧೯೧೯, ಏಪ್ರಿಲ್ ೧೩ರಂದು,ಬ್ರಿಟಿಷರು ಜಾರಿಗೆ ತಂದ ರೌಲಟ್ ಆಕ್ಟನ್ನು ವಿರೊಧಿಸಿ ಪಂಜಾಬ್ ರಾಜ್ಯದ ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯ‍ನ್ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು, ಮುಖ್ಯವಾಗಿ ಪಂಜಾಬಿ ನಾಗರೀಕರು, ಸಮಾವೇಶಗೊಂಡಿದ್ದರು. ಅದು ಸಿಖ್ಖರ ಪವಿತ್ರ ದಿನಗಳಲ್ಲೊಂದಾದ ಬೈಸಾಖಿ ದಿನ.ಆ ಪವಿತ್ರದಿನದಂದು ಬೈಸಾಖಿ ಹಬ್ಬವನ್ನು ಆಚರಿಸಲು ಅಮೃತಸರದಲ್ಲಿ ಸಮಾವೇಶಗೊಳ್ಳುವುದು ಸಂಪ್ರದಾಯವಾಗಿ ರೂಪುಗೊಂಡಿತ್ತು. ಸಂವಹನ ತಂತ್ರಜ್ಞಾನವು ತೀರಾ ಹಿಂದುಳಿದಿದ್ದ ಪಂಜಾಬಿನಲ್ಲಿ, ಗ್ರಾಮೀಣ ಪ್ರದೇಶದಿಂದ ಅಮೃತಸರಕ್ಕೆ ಬರುತ್ತಿದ್ದ ಜನರಿಗೆ ಮಾಹಿತಿಯು, ಸಮಾಚಾರಗಳು ಲಭ್ಯವಾಗಿರಲಿಲ್ಲ. ಶಾಸನಬದ್ಧವಾಗಿ ಅಮೃತಸರದಲ್ಲಿ ಐದಕ್ಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ (ಇದನ್ನು, 'ಮಾರ್ಷಲ್ ನಿಯಮ' ಎನ್ನುತ್ತಿದ್ದರು). ಆದ್ದರಿಂದ ಅಂದು ನಡೆದ ಸಮಾವೇಶ, ನಿಯಮದ ಉಲ್ಲಂಘನೆಯಾಗಿತ್ತು ಎನ್ನಲಾಗುತ್ತದೆ.

*🇮🇳ಹತ್ಯಾಕಾಂಡ:*

ತೊಂಬತ್ತು (೯೦) ಸೈನಿಕರಿದ್ದ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ತುಕಡಿಯೊಂದು ಉದ್ಯಾನವನಕ್ಕೆ ಎರಡು ಶಸ್ತ್ರಸಜ್ಜಿತ ಕಾರುಗಳೊಂದಿಗೆ ಬಂದಿತು. ಮೆಷಿನ್ಗನ್ ‍ಗಳನ್ನು ಅಳವಡಿಸಲಾಗದ್ದ ಆ ವಾಹನಗಳು, ಉದ್ಯಾನದ ಕಡಿದಾದ ಬಾಗಿಲಿನಿಂದ ಬರಲು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕರಾದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಅವರು, ಉದ್ಯಾನದೊಳಗೆ ಕಾಲಿಡುತ್ತಲೇ, ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ, ಗುಂಪು ಚದುರುವಂತೆ ಯಾವೊಂದು ಆದೇಶವನ್ನೀಯದೇ, ಹಠಾತ್ತಾಗಿ ಗುಂಡಿನ ಮಳೆಗರೆವಂತೆ ತಮ್ಮ ತುಕಡಿಗೆ ಆದೇಶವನ್ನಿತ್ತರು. ಅದರಲ್ಲಿಯೂ ವಿಶೇಷವಾಗಿ, ಜನಸಾಂದ್ರತೆ ಎಲ್ಲಿ ಹೆಚ್ಚಾಗಿರುವುದೋ ಅತ್ತಕಡೆ ಗುಂಡಿನ ದಾಳಿ ಕೇಂದ್ರೀಕೃತವಾಗುವಂತೆ ಆದೇಶಿಸಿದರು.ಗುಂಡಿನ ದಾಳಿಯು ಸಂಜೆ ೧೭:೧೫ಕ್ಕೆ ಪ್ರಾರಂಭವಾದದ್ದು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ, ಸತತವಾಗಿ ನಡೆಯಿತು. ಸುತ್ತಲೂ ಇಟ್ಟಿಗೆ ಗೋಡೆಗಳಿಂದ, ಕಟ್ಟಡಗಳಿಂದ ಆವೃತವಾಗಿದ್ದ ಉದ್ಯಾನವನಕ್ಕೆ ಇದ್ದದ್ದು ಐದು ಕಡಿದಾದ ದ್ವಾರಗಳು ಮಾತ್ರ. ಅದರಲ್ಲಿ ಬಹುತೇಕ ಶಾಶ್ವತವಾಗಿ ಮುಚ್ಚಲ್ಪಟ್ಟವಂಥವು. ತುಕಡಿಯಿದ್ದ ದ್ವಾರದ ಹೊರತಾಗಿ ಇನ್ನೊಂದೇ ದ್ವಾರವು ಮಾರ್ಗವಾಗಿ ಉಳಿದಿದ್ದರಿಂದ, ಕಂಗಾಲಾದ ಜನರು ಗೋಡೆಯನ್ನು ಹತ್ತಿ ಹಾರಲು ಪ್ರಯತ್ನಿಸಿದರು.ಬಹಳಷ್ಟು ಜನರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಬಾವಿಯೊಳಗೆ ಹಾರಿದರು. ಈ ಹತ್ಯಾಕಾಂಡ ಸ್ಮಾರಕದಲ್ಲಿನ ಅಂಶವೊಂದರ ಪ್ರಕಾರ, ಬಾವಿಯೊಂದರಿಂದಲೇ ಸುಮಾರು ೧೨೦ ಶವಗಳನ್ನು ಹೊರತೆಗೆಯಲಾಗಿತ್ತು. ಹತ್ಯಾಕಾಂಡದಿಂದ ನೂರಾರು ಜನರು ಸಾವನಪ್ಪಿದರಲ್ಲದೆ, ಸಾವಿರಾರು ಮಂದಿ ಗಾಯಗೊಂಡರು. ಸರ್ಕಾರಿ ಮೂಲಗಳ ಪ್ರಕಾರ ೩೭೯ ಮಂದಿ ಸಾವನಪ್ಪಿದರಾದರೂ, ಆದರೆ ಸಾವಗೀಡಾದವರ ನಿಜವಾದ ಸಂಖ್ಯೆ ಇನ್ನು ಹೆಚ್ಚಿತ್ತು ಎನ್ನಲಾಗುತ್ತದೆ.ಕರ್ಫ್ಯು ವಿಧಿಸಿದ ಕಾರಣ, ಗಾಯಗೊಂಡ ಹಲವರನ್ನು ಹತ್ಯಾಕಾಂಡದ ಸ್ಥಳದಿಂದ ಇತರೆಡೆಗೆ ಸ್ಥಳಾಂತರಿಸಲಾಗಲಿಲ್ಲ. ನಿಜವಾದ ಸಾವಿನ ಸಂಖ್ಯೆಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಈ ಘಟನೆ ನಡೆದ ಬಳಿಕ, ಬ್ರಿಟಿಷ್ ಸೇನೆಗೆ, ವಿದ್ರೋಹಿ ಸೈನ್ಯವು ಎದುರಾದುದರಿಂದ, ಅವರಿಗೆ ತಕ್ಕ ಪಾಠ ಕಲಿಸಿದ್ದಾಗಿ, ಜನರಲ್ ಡೈಯರನು ತನ್ನ ಮೇಲಧಿಕಾರಿಗಳಿಗೆ ವರದಿಯೊಪ್ಪಿಸಿದನು.ಇದಕ್ಕೆ ಉತ್ತರಿಸಿದ ಪಂಜಾಬ್‌ನ ಅಂದಿನ ಲೆಫ್ಟಿನೆಂಟ್-ಗವರ್ನರ್ಆದ ಮೈಕಲ್ ಓ'ಡ್ವಾಯರ್,ಅವರಿಗೆ ತಕ್ಕ ಪಾಠ ಕಲಿಸಿದಿರಿ, ಲೆಫ್ಟಿನೆಂಟ್-ಗವರ್ನರ ಇದನ್ನು ಅನುಮೋದಿಸುತ್ತಾರೆ ಎಂದು ತಂತಿಯ ಮೂಲಕ ಜನರಲ್ ಡೈಯರ್‌ಗೆ ಸಂದೇಶ ಕಳುಹಿಸಿದರು. ಮೈಕಲ್ ಓ'ಡ್ವಾಯರ್ನ ಇಚ್ಚೆಯಂತೆ ಈ ಘಟನೆಯ ನಂತರ, ಅಂದಿನ ವೈಸರಾಯ್ಯಾಗಿದ್ದ, ಫ್ರೆಡ್ರಿಕ್ ತೆಸಿಂಗರ್, ಅಮೃತಸರ ಹಾಗು ಅದರ ಸುತ್ತ-ಮುತ್ತ ಮಿಲಿಟರಿ ಆಡಳಿತವನ್ನು ಹೇರುವಂತೆ ಆದೇಶಿಸಿದನು.ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ಹಂಟರ್ ಆಯೋಗ ಅನ್ನು ಸ್ಥಾಪಿಸುವಂತೆ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗೊ ನಿರ್ಧರಿಸಿದನು. ಈ ಆಯೋಗದೆದುರು ಮೈಕಲ್ ಓ'ಡ್ವಾಯರ್ನನ್ನು ಕರೆತರಲಾಯಿತು. ವಿಚಾರಣೆಯ ವೇಳೆ, ಜಲಿಯನ್‌ವಾಲ ಬಾಗ್ ನಲ್ಲಿ ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗ್ಗೆ ತನಗೆ ಅಂದಿನ ದಿನ ೧೨.೪೦ರ ವೇಳೆಗೆ ತಿಳಿಯಿತಾದರೂ, ಇದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲವೆಂದು, ಡ್ವಾಯರ್ ಒಪ್ಪಿಕೊಂಡನು.ಇದಲ್ಲದೆ, ತಾನು ಜಲಿಯನ್‌ವಾಲ ಬಾಗ್ ‌ಗೆ ಗುಂಡು ಹಾರಿಸುವ ಉದ್ದೇಶದಿಂದಲೆ ತೆರಳಿದ್ದಾಗಿ ತಿಳಿಸಿದನು. "ಜಲಿಯನ್‌ವಾಲಾ ಬಾಗನಲ್ಲಿ ಸೇರಿದ ಜನರನ್ನು ಚದುರಿಸಲು, ಗುಂಡಿನ ಅವಶ್ಯಕತೆ ಇರಲ್ಲಿಲವಾದರೂ, ತಾನು ಆ ಕ್ರಮ ಕೈಗೊಂಡಿರದಿದ್ದರೆ, ಜನರು ಮತ್ತೆ ಗುಂಪು ಸೇರಿ ತನ್ನನ್ನು ನೋಡಿ

ಪೈಕಾ ದಂಗೆ* ( ಬಿದ್ರೋಹಾ-)- 1817 (2017 ಕ್ಕೆ 200 ವರ್ಷ )

*ಪೈಕಾ ದಂಗೆ* ( ಬಿದ್ರೋಹಾ-)- 1817
(2017 ಕ್ಕೆ 200 ವರ್ಷ )

ಪೈಕಾಗಳು ಒಡಿಶಾದ ಪ್ರಾಚೀನ ಯೋಧರ ಒಂದು ಪಂಗಡ

1857 ರಲ್ಲಿ ಸ್ವಾತಂತ್ರ್ಯದ ಮೊದಲ ಯುದ್ಧಕ್ಕೆ ಹಿಂದಿನದು ಆದರೆ ದಂಗೆ‌ ನೆಡೆಯಲಿಲ್ಲ.

ಈ ಬಂಡಾಯವು ಭಾರತದ ಪೂರ್ವ( ಓಡಿಸ್ಸಾ) ಭಾಗದಲ್ಲಿ ಬ್ರಿಟಿಷ್ ಆಡಳಿತದ ಅಡಿಪಾಯವನ್ನು ಬೆಚ್ಚಿಬೀಳಿಸಿತು.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬಾಡಿಗೆ ರಹಿತ ಭೂಮಿಯನ್ನು ವಶಪಡಿಸಿಕೊಂಡಾಗ ಈ ದಂಗೆ ನಡೆಯಿತು

1817 ರಲ್ಲಿ ನಡೆದ ಈ ಕ್ರಾಂತಿಗೆ ಕಾರಣರು ಪೈಕಾಗಳು. ಒಡಿಶಾದ ಗಜಪತಿ ರಾಜನ ಆಡಳಿತದಲ್ಲಿ ಯುದ್ಧದ ಸಂದರ್ಭ ರಾಜನಿಗೆ ಇವರು ನೆರವಾಗುತ್ತಿದ್ದರು. ಬಾಕ್ಸಿ ಜಗಂಢೂ ಬಿದ್ಯಾಧರ ಎಂಬ ನಾಯಕನ ನೇತೃತ್ವದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಮೊದಲು ಹೋರಾಟ ನಡೆಸಿತ್ತು ಈ ಗುಂಪು. ಇದನ್ನು ಪೈಕಾ ಬಿದ್ರೋಹ ಅಥವಾ ದಂಗೆ ಎಂದು ಕರೆಯಲಾಗಿತ್ತು.

ವಿವರಣೆ- ಭಾರತದ ಇತಿಹಾಸದ ಘಟನೆಗಳು ಉದ್ದೇಶಪೂರ್ವಕವಾಗಿಯೇ ಮುಚ್ಚಲ್ಪಟ್ಟಿವೆ. ಬ್ರಿಟಿಷರು ತಮ್ಮ ಸ್ವಂತ ಲಾಭಕ್ಕೆಂದೇ ಆರಂಭಿಸಿದ ರೈಲ್ವೇ, ಅಂಚೆ-ತಂತಿ, ಉದ್ಯಮ, ಕೆಲ ಸುಧಾರಣೆಗಳನ್ನೇ ಘನವಾಗಿ ಪ್ರತಿಪಾದಿಸುವ ಆಷಾಢಭೂತಿ ಇತಿಹಾಸಕಾರರಿಗೆ ಭಾರತೀಯರ ಸ್ವಾತಂತ್ರ್ಯದ ಉತ್ಕಟೇಚ್ಛೆ, ಅದಕ್ಕಾಗಿನ ಹೋರಾಟ, ಬ್ರಿಟಿಷರ ಕ್ರೌರ್ಯವನ್ನು ವರ್ಣಿಸುವಾಗ ಕಣ್ಣಿಗಡ್ಡವಾಗಿ ಪೊರೆ ಬಂದು ಕೂತಿತು. ಸ್ವಾತಂತ್ರ್ಯ ವೀರ ಸಾವರ್ಕರ್ 1857ರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಬರೆಯುವ ಸಾಹಸ ಮಾಡದಿರುತ್ತಿದ್ದರೆ, ಭಾರತದ ಸ್ವಾತಂತ್ರ್ಯ ಹೋರಾಟ ಗಾಂಧಿಯಿಂದಲೇ ಶುರುವಾಯಿತೆಂಬ ಕಾಂಗ್ರೆಸ್ಸಿಗರ ಅಪಲಾಪದ ಮೋಡಿಗೆ ಪ್ರತಿಯೊಂದು ಭಾರತದ ಪೀಳಿಗೆ ಒಳಗಾಗುತ್ತಿತ್ತೇನೋ. 1857ಕ್ಕೂ ಮುನ್ನ ನಡೆದ ಹಲವಾರು ಕ್ರಾಂತಿ ಹೋರಾಟಗಳು 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರತಳಹದಿಯೊದಗಿಸಿದವು ಎನ್ನಲಡ್ಡಿಯಿಲ್ಲ. ಇದರೊಂದಿಗೆ ಭಾರತೀಯರಲ್ಲಿ ಐಕ್ಯಮತವಿರಲಿಲ್ಲ, ಹೋರಾಡದೆ ದಾಸ್ಯದ ಬಾವಿಗೆ ಬೀಳುವಂತಾಯಿತು ಎನ್ನುವ ಪೊಳ್ಳು ವಾದಗಳೆಲ್ಲ ಕಾಲಕಾಲಕ್ಕೂ ಇಲ್ಲಿ ನಡೆದ ಸಂಘರ್ಷಗಳ ಬೆಳಕಿನಲ್ಲಿ ಕರಗಿ ಹೋಗುತ್ತವೆ. ಭಾರತೀಯರ ಸ್ವಾತಂತ್ರ್ಯ ಪ್ರಾಪ್ತಿಯ ತುಡಿತದ ಅಂತಹ ಒಂದು ಕಥೆಯೇ ಪೈಕಾ ಕ್ರಾಂತಿ!

               ಪೈಕಾಗಳು ಒಡಿಶಾದ ಪ್ರಾಚೀನ ಯೋಧರ ಒಂದು ಪಂಗಡ. ಕಾಲ ಬದಲಾದರೂ ಪೈಕಾಗಳ ವೀರತ್ವಕ್ಕೆ ಕುಂದು ಬಂದಿರಲಿಲ್ಲ. ಯುದ್ಧದ ಸಮಯದಲ್ಲಿ ರಾಜನ ಸೈನ್ಯದಲ್ಲಿ ಮುಂದಾಳುಗಳಾಗಿ, ಉಳಿದ ಸಮಯದಲ್ಲಿ ಕೋತ್ವಾಲ, ಆರಕ್ಷಕರಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ ಧೀರರು ಪೈಕಾಗಳು. ಇವರ ಸೇವಾ ಮನೋಭಾವನೆಯಿಂದ ಸಂತೃಪ್ತರಾದ ರಾಜರು ಕಾಲಕಾಲಕ್ಕೆ ಪೈಕಾಗಳಿಗೆ ಭೂಮಿಯನ್ನು ಕಾಣಿಕೆಯಾಗಿ ನೀಡುತ್ತಿದ್ದರು. ಕತ್ತಿವರಸೆಯಲ್ಲಿ ನಿಷ್ಣಾತರಾದ ಪ್ರಹರಿಗಳು, ಧನುರ್ವಿದ್ಯಾ ಪ್ರವೀಣ ಧೇಂಕಿಯಾಗಳು, ಕೋವಿಯ ಕೋವಿದರಾದ ಬನುವಾಗಳೆಂಬ ಮೂರು ವರ್ಗಗಳು ಈ ಪೈಕಾಗಳಲ್ಲಿವೆ.

              1803ರಲ್ಲಿ ಮರಾಠರಿಂದ ಒಡಿಷಾವನ್ನು ಕಿತ್ತುಕೊಂಡ ಆಂಗ್ಲರು ಅಲ್ಲಿ ತಮ್ಮ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಹೊರಟಾಗ ಅದು ಸಹಜವಾಗಿ ಸಾಮಂತ ಖೋರ್ಡಾ ದೊರೆ ಎರಡನೇ ಮುಕುಂದ ದೇವನ ಕಣ್ಣು ಕೆಂಪಗಾಗಿಸಿತು. ಅತ ಪೈಕಾಗಳನ್ನು ಜೊತೆಗೂಡಿಸಿಕೊಂಡು ಹೋರಾಡಲು ಅಣಿಯಾಗುತ್ತಿರುವಂತೆಯೇ ಬ್ರಿಟಿಷರು ಸುತ್ತುವರಿದು ಆತನನ್ನು ಖೋರ್ಡಾದಿಂದ ಹೊರದಬ್ಬಿದರು. ಆತನ ಅರಮನೆ, ರಾಜ್ಯ ಬ್ರಿಟಿಷರ ವಶವಾಯಿತು. ಪೈಕಾಗಳ ಭೂಮಿಯನ್ನೂ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರ ಕಿತ್ತುಕೊಂಡಿತು. ಹೀಗೆ ಇನ್ನೂರು ವರ್ಷಗಳಿಂದ ರಾಜಧಾನಿಯಾಗಿ ಮೆರೆದಿದ್ದ ಖೋರ್ಡಾದ ಶುಕ್ರದೆಸೆ ಅಂತ್ಯವಾಗುವ ಸೂಚನೆ ದೊರಕಿತು. ಪರಂಪಾರಗತವಾಗಿ ತಮಗೆ ದೊರೆತಿದ್ದ ಉಂಬಳಿಯನ್ನು ಕಿತ್ತುಕೊಂಡು ಸುಲಿಗೆ, ದಬ್ಬಾಳಿಕೆಯನ್ನು ಆರಂಭಿಸಿದ ಕಂಪೆನಿಯ ಮೇಲೆ ಪೈಕಾಗಳು ಸಹಜವಾಗಿಯೇ ಆಕ್ರೋಶಿತಗೊಂಡರು. ಪ್ರಚಲಿತವಿದ್ದ ಕೌರಿ ಕರೆನ್ಸಿ ವ್ಯವಸ್ಥೆಯನ್ನು ಬದಲಾಯಿಸಿತು ಕಂಪೆನಿ ಸರಕಾರ. ವಹಿವಾಟುಗಳೆಲ್ಲಾ ಬೆಳ್ಳಿಯ ನಾಣ್ಯಗಳಲ್ಲೇ ನಡೆಯಬೇಕೆಂದು ತಾಕೀತು ಮಾಡಿತು. ಬೆಳ್ಳಿಯ ನಾಣ್ಯಗಳ ಪೂರೈಕೆ ಕಡಿಮೆಯಿದ್ದ ಕಾರಣ ಜನತೆ ತೆರಿಗೆ ಸಲ್ಲಿಸಲು ವಿಫಲವಾದಾಗ ನಿರ್ದಾಕ್ಷಿಣ್ಯವಾಗಿ ಅವರ ಭೂಮಿಯನ್ನು ಸೆಳೆದುಕೊಂಡಿತು. ಸಮುದ್ರದ ನೀರಿನಿಂದ ಉಪ್ಪು ತಯಾರಿಸುವುದನ್ನೂ ನಿಷೇಧಿಸಿತು. ಇದು ಪೈಕಾಗಳನ್ನು ಮತ್ತಷ್ಟು ಕೆರಳಿಸಿತು. ಬ್ರಿಟಿಷರ ದುರ್ನೀತಿಯಿಂದ ಕ್ರೋಧಗೊಂಡ ಸಾಮಾನ್ಯ ಜನತೆ ಬ್ರಿಟಿಷರ ವಿರುದ್ಧ ಮಸೆದು ನಿಲ್ಲಲು ಪೈಕಾಗಳನ್ನು ಹುರಿದುಂಬಿಸಿತು.

              ಆಗ ಮುಕುಂದ ದೇವನ ಸೇನಾಧಿಪತಿಯಾಗಿದ್ದವನು ಜಗಬಂಧು ವಿದ್ಯಾಧರ ಬಕ್ಷಿ. ಬಕ್ಷಿ ಎನ್ನುವುದು ಒರಿಸ್ಸಾದಲ್ಲಿ ಸೇನಾ ಮುಖ್ಯಸ್ಥರಿಗೆ ನೀಡಲಾಗುತ್ತಿದ್ದ ಉಪಾಧಿ. ದೇಶಕ್ಕೆ ಸಲ್ಲಿಸಿದ ಸೇವೆಗೆ ಕೃತಜ್ಞತಾಪೂರ್ವಕವಾಗಿ ರಾಜವಂಶದಿಂದ ವಂಶದ ಪೂರ್ವಜರಿಗೆ ಬಂದ ಜಹಗೀರು ಜಮೀನು ಜಗಬಂಧುವಿನ ಕೈಯಲ್ಲಿ ಝಗಮಗಿಸುತ್ತಿತ್ತು. ಆ ಜಮೀನನ್ನು ಮೋಸದಿಂದ ಪುರಿಯ ಜಿಲ್ಲಾಧಿಕಾರಿ ವಶಪಡಿಸಿಕೊಂಡ. ತನಗಾದ ಮೋಸ ಜೊತೆಗೆ ತನ್ನ ಒಡೆಯನಿಗಾದ ಅನ್ಯಾಯ, ರೈತಾಪಿ ವರ್ಗದ ಮೇಲೆ ಬ್ರಿಟಿಷರು ಎರಗುತ್ತಿದ್ದ ವೈಖರಿಯನ್ನು ನೋಡಿ ಜಗಬಂಧು ರೋಸಿಹೋದ. ಆತ ರೈತಾಪಿ, ಬುಡಕಟ್ಟು ವರ್ಗ ಹಾಗೂ ತನ್ನ ಪೈಕ ಜನಾಂಗವನ್ನು ಸಂಘಟಿಸಿದ. ಮಾರ್ಚ್ 1817ರಲ್ಲಿ 400 ಜನರಿದ್ದ ಖೋಂಡ್ ಎಂಬ ಬುಡಕಟ್ಟು ವರ್ಗ ಖೋರ್ಡಾ ಹಾಗೂ ಘೂಮುಸರ್ಗಳನ್ನು ಬ್ರಿಟಿಷ್ ಅಧಿಪತ್ಯದಿಂದ ಬಿಡುಗಡೆಗೊಳಿಸಲು ಧಾವಿಸಿ ಬಂತು. ಜಗಬಂಧು ತನ್ನ ಪೈಕ ಯೋಧರು ಹಾಗೂ ರಾಜಾ ಮುಕುಂದ ದೇವನೊಡನೆ ಈ ಯೋಧ ಪಡೆಯನ್ನು ಸೇರಿಕೊಂಡು ಅದರ ನೇತೃತ್ವ ವಹಿಸಿದ. ಈ ಕ್ರಾಂತಿ ಸೈನ್ಯ ಕೈಗೆ ಸಿಕ್ಕ ಬ್ರಿಟಿಷ್ ಅಧಿಕಾರಿಗಳನ್ನು ಸದೆಬಡಿದು ಅವರನ್ನು ಓಡಿಸಿ ಎರಡೂ ನಗರಗಳನ್ನೂ ಸ್ವತಂತ್ರಗೊಳಿಸಿತು. ಮಾರ್ಗ ಮಧ್ಯದಲ್ಲಿ ಜಮೀಂದಾರರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗದ ಬೆಂಬಲ ಈ ಸೇನೆಗೆ ದೊರಕಿತು. ಕನಿಕಾ, ಕುಜಾಂಗ್, ನಯಾಘರ್, ಘೂಮುಸರ್ಗಳ ಅರಸರು, ಕರಿಪುರ, ಮಿರ್ಚ್ ಪುರ, ಗೋಲ್ರಾ, ಬಲರಾಮಪುರ, ರೂಪಾಸಾ ಮೊದಲಾದ ಸ್ಥಳಗಳ ಜಮೀಂದಾರರು ಈ ಕ್ರಾಂತಿ ಸೇನೆಗೆ ಸಹಕಾರಿಯಾಗಿ ನಿಂತರು. ಈ ಕ್ರಾಂತಿ ಕ್ಷಣಮಾತ್ರದಲ್ಲಿ ಪುರಿ, ಪಿಪ್ಲಿ ಹಾಗೂ ಕಟಕ್'ಗಳಿಗೂ ಹಬ್ಬಿತು. ಪುರಿಯ ಮಂದಿರದ ಮೇಲೆ ಕೇಸರಿ