ಶ್ರಿ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ

*ಶ್ರಿ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ*

ಪರಿಪೂರ್ಣ ನಾಮ *ಶ್ರಿಆದಿ ಶಂಕರಾಚಾರ್ಯ*

*ವೈಶಾಖ ಶುದ್ಧ ಪಂಚಮಿಯಂದು* "ಶ್ರೀ ಶಂಕರ ಜಯಂತಿ" ಈ ದಿನವನ್ನು ಭಾರತ ಸರ್ಕಾರ ದಾರ್ಶ'ನಿಕರ ದಿನ ಎಂದು ಘೋಷಿಸಿದೆ

1. *ಶ್ರೀ ಶಂಕರ ಜಯಂತಿ* : ವೈಶಾಖ ಶುದ್ಧ ಪಂಚಮಿ

2. *ಕಾಲ* : ಕ್ರಿ.ಶ.788-820

3. *ತಾಯಿ-ತಂದೆ*  ಆರ್ಯಾಂಬಾ ಶಿವಗುರು

4. *ಜನ್ಮಸ್ಥಳ* : ಕೇರಳದ ಪೂರ್ಣ ನದಿ ತೀರದ ಕಾಲಡಿ

5. *ಸನ್ಯಾಸ ಸ್ವೀಕಾರ* : ಎಂಟನೆಯ ವರ್ಷ

6. *ಗುರುಗಳು* : ಶ್ರೀ ಗೋವಿಂದ ಭಗವತ್ಪಾದರು

7. *ಪ್ರತಿಪಾದಿಸಿದ ದರ್ಶನ* : ಅದ್ವೈತ ಸಿದ್ಧಾಂತ

8. *ಪಂಥಗಳು* : ಶಿವ,ವೈಷ್ಣವ,ಶಾಕ್ತ,ಸೌರ ಗಾಣಪತ್ಯ,ಕೌಮಾರ.

9 *.ಪಂಚಾಯತನ ದೇವತೆಗಳು* :ಸೂರ್ಯ,ಗಣಪತಿ,ದುರ್ಗೆ,ಶಿವ,ವಿಷ್ಣು.

10. *ಶಂಕರರ ಮಾತೃಭಾಷೆ* : ಮಲಯಾಳಂ

11. *ಶಂಕರರ ಸಂಪರ್ಕ ಭಾಷೆ* : ಸಂಸ್ಕೃತ

12. *ಚಿನ್ನದ ನೆಲ್ಲಿಕಾಯಿ ಮಳೆ* ಸುರಿಸಿದ ಸ್ತೋತ್ರ : ಕನಕಧಾರ ಸ್ತೋತ್ರ

13. *ನೆಲ್ಲಿಕಾಯಿ ಭಿಕ್ಷೆಯಿತ್ತ* ಮನೆಯ ಇಂದಿನ ಹೆಸರು : ಸ್ವರ್ಣತ್ತಿಲ್ಲಂ

14. *ಗುರುದ್ರೋಹ* : ತುಷಾಗ್ನಿಯಲ್ಲಿ ಆತ್ಮ ಸಮರ್ಪಿಸಿಕೊಂಡವರು,ಕುಮಾರಿಲ ಭಟ್ಟರು ( ಕುಮಾರ್ಲ ಭಾಟ್ )

15. *ಶಂಕರರ ಶಿಷ್ಯಂದಿರು ಮತ್ತು ಪೀಠಗಳ* ಪ್ರಥಮಾಚಾರ್ಯರು :

ಪದ್ಮಪಾದಚಾರ್ಯ,
ಹಸ್ತಾಮಲಕಾಚಾರ್ಯ,
ತೋಟಕಾಚಾರ್ಯ,
ಸುರೇಶ್ವರಾಚಾರ್ಯ

16. *ಪದ್ಮಪಾದಾಚಾರ್ಯರ* ಪೂರ್ವನಾಮ : ಸನಂದನ

17. *ಸುರೇಶ್ವರಾಚಾರ್ಯರ* ಪೂರ್ವನಾಮ : ಮಂಡನ ಮಿಶ್ರ

18. *ರಚಿಸಿದ ಗ್ರಂಥಗಳು* : 54

19. *ರಚಿಸಿದ ಕೊನೆಯ ಗ್ರಂಥ* : ವಿವೇಕ ಚೂಡಾಮಣಿ

20. *ಪ್ರಸ್ಥಾನತ್ರಯಗಳು* : ಬ್ರಹ್ಮಸೂತ್ರ,ಭಗವದ್ಗೀತೆ,ಉಪನಿಷತ್ತುಗಳು

21. *ಬ್ರಹ್ಮ ಸೂತ್ರ* : 555 ಸೂತ್ರಗಳು

22. *ಭಗವದ್ಗೀತೆ* : 18 ಅಧ್ಯಾಯ ( ವ್ಯಾಖ್ಯಾನ ) 700 ಶ್ಲೋಕಗಳು

23. *ಉಪನಿಷತ್ತುಗಳು*  :  10

24. *ರಚಿಸಿದ ಸ್ತೋತ್ರಗಳು* : 72

25. *ಕಾಶ್ಮೀರದಲ್ಲಿ* ಕುಷ್ಠರೋಗಿಯ ಮೋಕ್ಷಕ್ಕಾಗಿ ಹೇಳಿದ ಸ್ತೋತ್ರ :
       ಏಕಶ್ಲೋಕಿ ( ಕಿಂ ಜ್ಯೋತಿಸ್ತವ )

26. *ಕಾಶಿಯಲ್ಲಿ ರಚಿಸಿದ ಸ್ತೋತ್ರಗಳು* :

1.ಕಾಲಭೈರವಾಷ್ಟಕ,
2.ಮನೀಷಾ ಪಂಚಕ
3.ಅನ್ನಪೂರ್ಣ ಸ್ತೋತ್ರ
4.ಕಾಶಿ ಸ್ತೋತ್ರ

27. *ಚತುರಾಮ್ನಾಯ ಪೀಠಗಳು* ಮತ್ತು ಪೀಠಗಳ ಪ್ರಥಮಾಚಾರ್ಯರು :

ಶೃಂಗೇರಿ ಪೀಠ  - ಸುರೇಶ್ವರಾಚಾರ್ಯರು - ದಕ್ಷಿಣ
ಜಗನ್ನಾಥ ಪೀಠ - ಪದ್ಮಪಾದಾಚಾರ್ಯರು - ಪೂರ್ವ
ದ್ವಾರಕಾ ಪೀಠ - ಹಸ್ತಾಮಲಕಾಚಾರ್ಯರು - 292
ಪಶ್ಚಿಮ
ಜ್ಯೋತಿಷ್ಮತಿ ಪೀಠ - ತೋಟಕಾಚಾರ್ಯರು - ಉತ್ತರ

29. *ಪೀಠಗಳ ದೇವದೇವಿಯರು*

1.ಚಂದ್ರಮೌಳೇಶ್ವರ - ಶಾರದ ದೇವಿ
2.ಜಗನ್ನಾಥ - ವಿಮಲಾದೇವಿ
3.ಸಿದ್ದೇಶ್ವರ - ಭದ್ರಕಾಳಿ
4.ನಾರಾಯಣ - ಪೂರ್ಣದೇವಿ

30. *ಪವಿತ್ರ ತೀರ್ಥಗಳು* - ತುಂಗಾ,ಗೋಮತಿ,ಅಲಕಾನಂದ,ಪೂರ್ವಸಮುದ್ರ

31. *ಸರ್ವಜ್ಞ ಪೀಠಾರೋಹಣ* : ಕಾಶ್ಮೀರದ ಶಂಕರ ಗಿರಿಯಲ್ಲಿರುವ ಶಾರದ ಮಂದಿರ

32. *ಶಂಕರರ ಮಹಾ ಸಿದ್ಧಾಂತ* : ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ ಅರ್ಥ : ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ

33. *ಶಂಕರರ ಸಾಧನೆ* ;

1.ಅಷ್ಟವರ್ಷೇ ಚತುರ್ವೇದಿ - 8 ನೇ ವರ್ಷಕ್ಕೆ 4 ವೇದಗಳ ಅಧ್ಯಯನ

2.ದ್ವಾದಶೇ ಸರ್ವಶಾಸ್ತ್ರವಿತ್ - 12 ನೇ ವರ್ಷಕ್ಕೆ ಸಕಲ ಶಾಸ್ತೃಗಳ ಪಾಂಡಿತ್ಯ

3.ಷೋಡಶೇ ಕೃತವಾನ್ ಭಾಷ್ಯಂ - 16 ನೇ ವರ್ಷಕ್ಕೆ ಭಾಷ್ಯ ರಚನೆ

4.ಮುವತ್ತೆರಡನೆ ವರ್ಷಕ್ಕೆ ದೇಹತ್ಯಾಗ

34. *ದೇಹತ್ಯಾಗ* - ಕೇದಾರನಾಥ - ವೈಶಾಖ ಶುದ್ಧ ದ್ವಾದಶಿ

Post a Comment

0 Comments