ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ

ಪೋರ್ಚುಗೀಸರು:-

# ಕ್ರಿ.ಶ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ ಟಾಂಟಿನೋಪಲ್ ನ್ನು ವಶಪಡಿಸಿಕೊಂಡರು. ಆದ್ದರಿಂದ ಇವರು ವ್ಯಾಪಾರಕ್ಕಾಗಿ ಹೊಸ ಮಾರ್ಗಗಳನ್ನು ಹುಡುಕಬೇಕಾಯಿತು.

# ಪೋರ್ಚುಗೀಸರ ನಾವಿಕ ವಾಸ್ಕೋಡಿಗಾಮ ಕ್ರಿ.ಶ 1498 ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಪತ್ತೆಹಚ್ಚಿದನು. ಅವನು ಭಾರತದಲ್ಲಿ ಮೊದಲು ಬಂದು ತಲುಪಿದ ಸ್ಥಳ ಕಲ್ಲಿಕೋಟೆಯಾಗಿದೆ.

# ಕೇರಳದ ಕಲ್ಲಿಕೋಟೆಯ ದೊರೆ "ಜಾಮೂರಿನ್"ವಾಸ್ಕೋಡಿಗಾಮನನ್ನು ಸ್ವಾಗತಿಸಿ, ವ್ಯಾಪರಕ್ಕೆ ಅನುಮತಿಯನ್ನು ಕೊಟ್ಟನು.

# ಪೋರ್ಚುಗೀಸರು ಕ್ರಿ.ಶ 1500 ರಲ್ಲಿ ತಮ್ಮ ಮೊದಲ ವ್ಯಾಪಾರಿ ಕೇಂದ್ರವನ್ನು ಕೊಚ್ಚಿನ್ ನಲ್ಲಿ ಸ್ಥಾಪಿಸಿದರು. ಮುಂದೆ ಇದೆ ಇವರ ರಾಜಧಾನಿಯಾಯಿತು. ನಂತರ ಇದನ್ನು ಗೋವಾಕ್ಕೆ ಸ್ಥಳಾಂತರಿಸಿದರು. ಗೋವಾ ಇವರ ಪ್ರಸಿದ್ಧ ರಾಜಧಾನಿಯಾಗಿತ್ತು.

# ಪೋರ್ಚುಗೀಸರ ಮೊದಲ ಗವರ್ನರ್ ಫ್ರಾನ್ಸಿಸ್ಕೋ-ಡಿ-ಅಲ್ಮೇಡಾ ಆಗಿದ್ದಾನೆ.ra

# ಪೋರ್ಚುಗೀಸರ ಪ್ರಸಿದ್ಧ ಗವರ್ನರ್ - ಅಲ್ಫಾನ್ಸೋ-ಡಿ-ಅಲ್ಬುಕರ್ಕ್ ಆಗಿದ್ದಾನೆ.

# ಇವರು ಕ್ರಿ.ಶ 1961 ಡಿಸೆಂಬರ್ 19 ರವರೆಗೆ ಇವರು ಭಾರತದ ಗೋವಾದಲ್ಲಿ ನೆಲೆಸಿದ್ದರು.

 

ಡಚ್ಚರು:-

# ಕ್ರಿ.ಶ 1602 ರಲ್ಲಿ ಸ್ಥಾಪನೆಯಾದ ಡಚ್ಚ ಈಸ್ಟ್ ಇಂಡಿಯಾ ಕಂಪೆನಿಯು ಹಾಲೆಂಡ್ ಅಥವಾ ನೆದರ್ ಲ್ಯಾಂಡ್ ದೇಶಕ್ಕೆ ಸೇರಿದ ಕಂಪನಿಯಾಗಿದೆ.

# ಕ್ರಿ.ಶ 1605 ರಲ್ಲಿ ಇವರು ಮೊದಲು ಭಾರತದ ಮಚಲಿಪಟ್ಟಣದಲ್ಲಿ ತಮ್ಮ ವ್ಯಾಪಾರಿ ಮಳಿಗೆಯೊಂದನ್ನು ಸ್ಥಾಪಿಸಿದರು. ಈ ಮಚಲಿಪಟ್ಟಣವು ಇವರ ರಾಜಧಾನಿಯೂ ಕೂಡ ಆಗಿತ್ತು.
ra
# ಕ್ರಿ.ಶ 1759 ರಲ್ಲಿ ಡಚ್ಚರು ಮತ್ತು ಬ್ರಿಟಿಷರ ನಡುವೆ ನಡೆದ ಯುದ್ಧದಲ್ಲಿ ಡಚ್ಚರು ಸೋತರು. ಸೋತ ಡಚ್ಚರು ಎಲ್ಲವನ್ನು ಬ್ರಿಟಿಷರಿಗೆ ಒಪ್ಪಿಸಬೇಕಾಯಿತು.

ಬ್ರಿಟಿಷರು:-

# ಕ್ರಿ.ಶ 1600 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಅಧಿಕಾರಕ್ಕೆ ತಂದರು. ಇದು ಒಂದು ಖಾಸಗಿ ಕಂಪನಿಯಾಗಿತ್ತು. 

# ಇದು ಕ್ರಿ.ಶ 1608 ರಲ್ಲಿ ಭಾರತಕ್ಕೆ ಬಂದು ಸೂರತ್ ನ್ನು ತಲುಪಿತು. ಇದು "ಕ್ಯಾಪ್ಟನ್ ಹಾಕಿನ್ಸ್" ನ ನಾಯಕತ್ವದಲ್ಲಿ ಬಂದು ತಲುಪಿತು.

# ಭಾರತಕ್ಕೆ ಭೇಟಿ ಕೊಟ್ಟ ಮೊದಲ ಬ್ರಿಟಿಷ್ ರಾಯಭಾರಿ ಕ್ಯಾಪ್ಟನ್ ಹಾಕಿನ್ಸ್ ಆಗಿದ್ದಾನೆ.

# ನಂತರ "ಸರ್ ಥಾಮಸ್ ರೋ" ಜಹಾಂಗಿರನ ಆಸ್ಥಾನಕ್ಕೆ ವ್ಯಾಪಾರದ ಅನುಮತಿಗಾಗಿ ಭೇಟಿ ಕೊಟ್ಟು ಅವನಿಂದ ಅನುಮತಿಯನ್ನು ಪಡೆದುಕೊಂಡನು.

# ಬ್ರಿಟಿಷರ ಮೊದಲ ವ್ಯಾಪಾರಿ ಕೇಂದ್ರವು ಸೂರತ್ ನಲ್ಲಿ ಸ್ಥಾಪಿತವಾಯಿತು. ಮೊದಲ ರಾಜಧಾನಿ-ಮುರ್ಷಿದಾಬಾದ್, ನಂತರ ಕಲ್ಕತ್ತಾ ಮತ್ತು ಕೊನೆಯ ರಾಜಧಾನಿ ದೆಹಲಿಯಾಗಿತ್ತು.

 

ಫ್ರೆಂಚರು:-

# ಕ್ರಿ.ಶ 1664 ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆಯಾಯಿತು.

# ಇದು ಒಂದು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿತ್ತು.

# ಇವರು ಕ್ರಿ.ಶ 1667 ರಲ್ಲಿ ಭಾರತದ ಸೂರತ್ ನಲ್ಲಿ ತಮ್ಮ ಮೊದಲ ವ್ಯಾಪಾರಿ ಕೋಟೆಯನ್ನು ಆರಂಭಿಸಿದರು.

# ಪ್ರೆಂಚರ ರಾಜಧಾನಿ ಪಾಂಡಿಚೇರಿಯಾಗಿತ್ತು. ಕ್ರಿ.ಶ 1742 ರಲ್ಲಿ ಭಾರತಕ್ಕೆ ಬಂದ ಡೂಪ್ಲೆ ಫ್ರೆಂಚರ ಅಧಿಕಾರ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದನು. ಇವನು ಮೊದಲ ಗವರ್ನರ್ ಆಗಿದ್ದನು.

 

ಅಂಗ್ಲೋ ಫ್ರೆಂಚ್ ಯುದ್ಧಗಳು ಅಥವಾ ಕರ್ನಾಟಿಕ್ ಯುದ್ಧಗಳು

ಮೊದಲನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1746-48):- ಫ್ರೆಂಚ್ ಗವರ್ನರ್ ಡೂಪ್ಲೆ ಮತ್ತು ಬ್ರಿಟಿಷರ ಮಧ್ಯ ನಡೆಯಿತು. ಇದರಲ್ಲಿ ಬ್ರಿಟಿಷರು ಸೋತರು.’ಏ ಲಾ ಚಾಪೆಲ್’ ಒಪ್ಪಂದ ಕ್ರಿ.ಶ 1748 ರ ಮೂಲಕ ಯುದ್ಧ ಕೊನೆಗೊಂಡಿತು.

ಎರಡನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1749-1755):- ಫ್ರೆಂಚ್ ಗವರ್ನರ್ ಡೂಪ್ಲೆ ಮತ್ತು ಬ್ರಿಟಿಷ್ ಗವರ್ನರ್ ರಾಬರ್ಟ್ ಕ್ಲೈವರ ನಡುವೆ ಈ ಯುದ್ಧ ನಡೆಯಿತು. ಇದರಲ್ಲಿ ಡೂಪ್ಲೆ ಸೋಲನ್ನನುಭವಿಸಿದನು. ಕ್ರಿ.ಶ 1755 ರಲ್ಲಿ ಪಾಂಡಿಚೇರಿ ಒಪ್ಪಂದದ ಮೂಲಕ ಈ ಯುದ್ಧ ಕೊನೆಗೊಂಡಿತು.

ಮೂರನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1756-1763):- ಈ ಯುದ್ಧವು ಫ್ರೆಂಚ್ ಗವರ್ನರ್ ಕೌಂಟ್ ಡಿ ಲಾಲಿ ಮತ್ತು ಬ್ರಿಟಿಷರ ರಾಬರ್ಟ್ ಕ್ಲೈವರ ನಡುವೆ ನಡೆಯಿತು. ಈ ಯುದ್ಧದಲ್ಲಿ ಫ್ರೆಂಚರು ಸೋತರು. ಮತ್ತು ಈ ವೇಳೆಗೆ ಕ್ರಿ.ಶ 1763 ರಲ್ಲಿ ಯುರೋಪಿನಲ್ಲಿ ಸಪ್ತವಾರ್ಷಿಕ ಯುದ್ಧಗಳು ಕೊನೆಗೊಂಡು ಪ್ಯಾರಿಸ್ ಶಾಂತಿ ಒಪ್ಪಂದವು ಏರ್ಪಟ್ಟಿತು.

ಈ ಯುದ್ಧಗಳ ಪರಿಣಾಮದಿಂದಾಗಿ ಫ್ರೆಂಚರು ಸೋಲನ್ನನುಭವಿಸಿ ಅವರ ಪ್ರಾಬಲ್ಯವನ್ನು ಕಳೆದುಕೊಂಡರು. ಈ ರೀತಿಯಾಗಿ ಫ್ರೆಂಚರ ಅವನತಿಯಾಯಿತು.

Post a Comment

6 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)